ಮಾರಾಟ ಮಳಿಗೆ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರು

Untitled design (1)
ಸಂಡೂರಿನ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಜಿ.ರೇಣುಕಾ ಮಲ್ಲೇಶಪ್ಪ, ನಿರ್ದೇಶಕರಾದ ಜಿ.ವಿರೇಶ್, ಉಪ್ಪಾರಹಳ್ಳಿ ಶೋಬಾ, ಸದಸ್ಯರಾದ ಬಿ.ವಸಂತಕುಮರ್, ಭುವನೇಶ್ ಮೇಟಿ ಇತರರಿದ್ದರು.
Published on

ಸಂಡೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಂಬ ಹೆಸರನ್ನು ಸರ್ಕಾರದ ಆದೇಶದ ಪ್ರಕಾರ ವಿವಿಧ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವೆಂದು ಮರು ನಾಮಕರಣ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಜೆ.ಎಂ.ಶಿವಪ್ರಸಾದ ಹೇಳಿದರು.


ಪಟ್ಟಣದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.


ಸಂಘದ ಸದಸ್ಯತ್ವ ಷೇರು ದರ 1150 ರೂ.ಗೆ ಹೆಚ್ಚಿಸಲಾಗಿದ್ದು, 100 ರೂ. 200 ರೂ.500 ರೂ. ಹೊಂದಿದ ಷೇರುದಾರರು ಕಾಯಂ ಸದಸ್ಯರಾಗಲು ಮಾ.31ರೊಳಗೆ ಪೂರ್ಣ ಮೊತ್ತ ಪಾವತಿಸಬೇಕು. ಒಟ್ಟು ಸಂಘದ ಸದಸ್ಯರ ಸಂಖ್ಯೆ 3,023 ಇದ್ದು, ಸದಸ್ಯರ ಷೇರು ಬಂಡವಾಳ 102.85 ಲಕ್ಷ ರೂ.ಇದೆ. 909 ಸದಸ್ಯರಿಗೆ ಕೆಸಿಸಿ ಸಾಲ 671.72 ಲಕ್ಷ ರೂ., 7 ಸದಸ್ಯರಿಗೆ ಮದ್ಯಮಾವಧಿ ಸಾಲ 39.80 ಲಕ್ಷ ರೂ., 11 ಸದಸ್ಯರಿಗೆ ಟ್ರಾಕ್ಟರ್ ಸಾಲ 60.31 ಲಕ್ಷ ರೂ.ವಿತರಿಸಲಾಗಿದೆ ಎಂದರು.


ಸಂಘಕ್ಕೆ 170 ಜನ ಸದಸ್ಯತ್ವ ಪಡೆದಿದ್ದು, ಸಂಘದ ಚರ ಮತ್ತು ಸ್ಥಿರಾಸ್ತಿ 69.54 ಲಕ್ಷ ರೂ. ಇದೆ. ಗೊಬ್ಬರ ಮಾರಾಟದಿಂದ ನಿವ್ವಳ ಲಾಭ 3.28 ಲಕ್ಷ ರೂ, 238 ಜನ ಯಶಸ್ವಿನಿ ಕಾರ್ಡ್‌ನಿಂದ 1,14,620 ರೂ. ಸಂಗ್ರಹವಾಗಿದೆ. ಸಂಘಕ್ಕೆ ನಬಾರ್ಡ್ ಮತ್ತು ಬಿಡಿಸಿಸಿ ಬ್ಯಾಂಕ್‌ಗಳಿಂದ ಹೊಸ ಮಾರಾಟ ಮಳಿಗೆ ನಿರ್ಮಾಣಕ್ಕೆ 50 ಲಕ್ಷ ರೂ.ಮಂಜೂರಾಗಿದೆ. ಯಶವಂತನಗರ, ಸುಶೀಲಾ ನಗರ ಗ್ರಾಮಗಳಲ್ಲಿ ಬೀಜ, ಗೊಬ್ಬರ ಮಾರಾಟ ಮಾಡಲು ರೈತ ಸದಸ್ಯರು ಸಹಕಾರ ನೀಡಬೇಕು. ಪಿಗ್ಮಿ ಸಂಗ್ರಹಿಸಲು ಇಬ್ಬರು ಏಜೆಂಟರನ್ನು ನೇಮಕ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.


ಸಂಘದ ಸಿಇಒ ಕೆ.ಶಿವಲಿಂಗಪ್ಪ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಜಿ.ರೇಣುಕಾ ಮಲ್ಲೇಶಪ್ಪ, ಸದಸ್ಯರಾದ ಕಿನ್ನೂರೇಶ್ವರ, ಕೆ.ಸತ್ಯಪ್ಪ, ಎಂಎಲ್‌ಕೆ ನಾಯ್ಡು, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಎಂ.ರಮೇಶ್, ಪ್ರಮುಖರಾದ ಆರ್.ತಿಪ್ಪಯ್ಯ, ಉಪ್ಪಾರಹಳ್ಳಿ ಶಿವಮೂರ್ತಿ, ಉಪ್ಪಾರಹಳ್ಳಿ ಶೋಭ, ಡಿ.ಸಣ್ಣ ಕುಮಾರಸ್ವಾಮಿ, ವಿರೇಶ್ ಗಾಣಿಗ, ಸಣ್ಣ ತಿಮ್ಮಪ್ಪ, ಕೆ.ಶರಣಪ್ಪ, ಎಂ.ಇಸ್ಮಾಯಿಲ್ ಸಾಬ್, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net