

ಚಿಕ್ಕಮಗಳೂರು: ಮೂಗ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ ಮತ್ತಾವರದ ಶ್ರೀ ಪಾರ್ಶ್ವನಾಥ ಜೈನ ಸಂಘದಿಂದ ನಿರ್ಮಿಸಲಾಗುತ್ತಿರುವ ಜೈನ ಸಮುದಾಯ ಭವನಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಆರ್ಥಿಕ ಕೊರತೆಯಿಂದ ಸಮುದಾಯ ಭವನ ಕಾಮಗಾರಿ ಸ್ಥಗಿತಗೊಂಡಿದ್ದು, ಸಮುದಾಯ ಭವನ ಪೂರ್ಣಗೊಳಿಸಲು ಹಣ ಒದಗಿಸಬೇಕೆಂದು ಜೈನ ಸಂಘದವರು ಹಾಗೂ ಮತ್ತಾವರ ಗ್ರಾಮಸ್ಥರು ಮನವಿ ಮಾಡಿದ್ದರು. ಇದೀಗ ಜೈನ ಸಮುದಾಯದ ಭವನ ಪೂರ್ಣಗೊಳಿಸಲು 50 ಲಕ್ಷ ರೂ. ಮಂಜೂರು ಮಾಡಿಸಿದ್ದು, ಈ ಅನುದಾನ ಬಳಸಿ ಸ್ಥಗಿತಗೊಂಡಿರುವ ಮತ್ತಾವರ ಜೈನ ಸಮುದಾಯ ಭವನವನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.