50 ಗ್ರಾಂ ಚಿನ್ನಾಭರಣ ಕಳವು

crime
Published on

ಹುಬ್ಬಳ್ಳಿ: ಯಶವಂತಪುರ-ಫಂಡರಪುರ ಎಕ್ಸ್‌ಪ್ರೆಸ್ ರೈಲ್ವೆಯಲ್ಲಿ ಶಿರಸಿ ಕರೆಗುಂಡಿ ರಸ್ತೆಯ ಪೂನಂ ಎಂಬುವವರು ಕುಟುಂಬ ಸಮೇತ ಪ್ರಯಾಣಿಸುವ ವೇಳೆ ನಿದ್ರೆಗೆ ಜಾರಿದಾಗ ಕಳ್ಳರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ 2.66 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

ಪೂನಂ ಅವರು ಜಾವಗಲ್‌ಗೆ ಹೋಗಿ ಅರಸೀಕೆರೆಯಿಂದ ಹುಬ್ಬಳ್ಳಿಗೆ ಸಾಮಾನ್ಯ ಬೋಗಿಯಲ್ಲಿ ವಾಪಸ್ ಪ್ರಯಾಣಿಸುತ್ತಿದ್ದಾಗ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ಫ್ಯಾನಿನ ಮೇಲಿಟ್ಟು ಮಲಗಿದ್ದರು. ಹುಬ್ಬಳ್ಳಿಗೆ ಬಂದಾಗ ಮರೆತು ಕೆಳಗೆ ಇಳಿದಿದ್ದಾರೆ. ನಂತರ ಆರ್‌ಪಿಎಫ್‌ನವರನ್ನು ಸಂಪರ್ಕಿಸಿದಾಗ ಕಳ್ಳರು ಚಿನ್ನಾಭರಣ ಕದ್ದು ಬೆಳ್ಳಿ ಮತ್ತು ಆಧಾರ್ ಕಾರ್ಡ್ ಸೇರಿ ಇತರ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ದೂರು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net