50 ಎಕರೆ ಗೋವಿನಜೋಳ ನಾಶ

Govinjola destroyed
Published on

ಸವಣೂರ: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಹೊಲದಲ್ಲಿನ ಬೆಳೆಯನ್ನು ಟ್ರ್ಯಾಕ್ಟರ್​ಗಳ ಮೂಲಕ ಹರಗುತ್ತಿರುವುದು ಸಾಮಾನ್ಯವಾಗಿದೆ.

ಹತ್ತಿಮತ್ತೂರ ವಿರಕ್ತಮಠದ ಪೀಠಾಧಿಪತಿ ನಿಜಗುಣ ಶಿವಯೋಗಿ ಸ್ವಾಮೀಜಿ ಅವರು ಕೃಷ್ಣಾಪುರ ಗ್ರಾಮದ ರಸ್ತೆಯ ಪಕ್ಕದಲ್ಲಿರುವ 50 ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಗೋವಿನಜೋಳ ಬೆಳೆಯನ್ನು ಗುರುವಾರ ರೂಟರ್ ಹೊಡೆಸಿ ನಾಶಪಡಿಸಿದ್ದಾರೆ.

50 ಎಕರೆ ಬಿತ್ತನೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಮಳೆ ಕೈಕೊಟ್ಟಿರುವುದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಭೂಮಿ ತಾಯಿ ನೆಚ್ಚಿಕೊಂಡಿರುವ ರೈತ ಧೃತಿಗೆಡದೆ ನಿತ್ಯ ಕಾಯಕದಲ್ಲಿ ತೊಡಗಬೇಕು. ಸಂದರ್ಭನುಸಾರ ಭಗವಂತ ಸಹಾಯಕ್ಕೆ ಬರುವ ನಿರೀಕ್ಷೆ ಇರಲಿ. ಸರ್ಕಾರ ರೈತರಿಗೆ ಸೂಕ್ತ ಸಂದರ್ಭದಲ್ಲಿ ಸಹಾಯಕ್ಕೆ ಮುಂದಾಗುವ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ನಿಜಗುಣ ಶಿವಯೋಗಿ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net