50.93 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ

1
Published on

ಮಂಗಳೂರು: ಚಿನ್ನವನ್ನು ಗುಳಿಗೆಗಳನ್ನಾಗಿಸಿ ಗುದದ್ವಾರದಲ್ಲಿ ಅಕ್ರಮವಾಗಿ ಬಚ್ಚಿಟ್ಟು ದುಬೈನಿಂದ ತರುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸಿದ್ದಾರೆ.

ಜ.12ರಂದು ಅಬುಧಾಬಿ ಮತ್ತು ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ತಪಾಸಣೆ ನಡೆಸಿದಾಗ ಅನುಮಾನಕ್ಕೆಡೆ ಮಾಡಿತ್ತು. ಈ ವೇಳೆ ಇಬ್ಬರು ಪ್ರಯಾಣಿಕರ ಬಳಿ ಒಟ್ಟು 815 ಗ್ರಾಂ ಚಿನ್ನ ಪತ್ತೆಯಾಗಿದ್ದು, ಅದರ ಮೌಲ್ಯ 50.93 ಲಕ್ಷ ಎಂದು ಅಂದಾಜಿಸಲಾಗಿದೆ.

ಇಬ್ಬರು ಪ್ರಯಾಣಿಕರು ಕೂಡ ಚಿನ್ನವನ್ನು ಪೇಸ್ಟ್ ಮಾಡಿ ಗುದದ್ವಾರದಲ್ಲಿ ಬಚ್ಚಿಟ್ಟು ತರುತ್ತಿದ್ದರು. ಪೇಸ್ಟ್ ಮಾಡಿ ಸಣ್ಣ ಉಂಡೆಗಳನ್ನಾಗಿಸಿ ಅದನ್ನು ಚಾಕಲೇಟ್ ಕವರ್‌ನಲ್ಲಿ ಸುತ್ತಿಟ್ಟು ಗುದದ್ವಾರದಲ್ಲಿ ತರುತ್ತಿದ್ದರು. ಪ್ರಯಾಣಿಕರ ವರ್ತನೆಯಿಂದ ಅನುಮಾನಗೊಂಡು ತಪಾಸಣೆ ನಡೆಸಿದಾಗ, ಚಿನ್ನ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದು ಬಜ್ಜೆ ಠಾಣೆಗೆ ಒಪ್ಪಿಸಿದ್ದಾರೆ. ಬಜ್ಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net