

ಲಿಂಗದಹಳ್ಳಿ: ಸೈದುಖಾನ್ ಗ್ರಾಮದಲ್ಲಿ ಶಾಸಕರ ನಿಧಿಯಿಂದ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಸೈದುಖಾನ್ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟಿಸಿ ಮಾತನಾಡಿದ ಅವರು, ಸೈದುಖಾನ್ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾಗಿದ್ದ ತಂಗುದಾಣ ನಿರ್ಮಾಣ ಮಾಡಲು ಸ್ಥಳದ ತೊಂದರೆ ಇದ್ದ ಸಂದರ್ಭದಲ್ಲಿ ಕಾಫಿ ತೋಟದ ಮಾಲೀಕ, ದಾನಿಗಳು ಆದ ನಿತಿನ್ ಭಾಗಮನೆ ನೀಡಿದ ನಿವೇಶನದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಎ ಕೃಷ್ಣನಾಯ್ಕ, ಸದಸ್ಯರು, ತಿಗಡ ಗ್ರಾಪಂ ಅಧ್ಯಕ್ಷೆ ನೀಲಮ್ಮ, ಸುದೀಪ್, ಸದಸ್ಯರು, ಬಗರ್ ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್, ಕಾಫಿ ತೋಟದ ವ್ಯವಸ್ಥಾಪಕ ಗೋವಿಂದ ಸಿಂಗ್, ಗ್ರಾಪಂ ಕಾರ್ಯದರ್ಶಿ ಶೇಖರಾಚಾರ್, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಅಬ್ದುಲ್ ಗರ್, ಆಂಡಿಗೌಡ, ಗ್ರಾಮಸ್ಥರಾದ ನಾಗರಾಜ್, ಸುಬ್ರಹ್ಮಣ್ಯ, ರಾಜೇಶ್, ಆರ್.ಸತ್ಯಪ್ಪ ಇತರರಿದ್ದರು.