

ಕಲಬುರಗಿ: ನಗರದ ಸಂಘತ್ರಾಸ್ ವಾಡಿಯ ಖಬರಸ್ಥಾನ ಸುತ್ತುಗೋಡೆ ಹತ್ತಿರದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಐದು ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಆಹಾರ ನಿರೀP್ಷÀಕ ಯ¯್ಲÁಲಿಂಗ ಹಾಗೂ ಸಿಬ್ಬಂದಿ ದಾಳಿ ನಡೆಸಿ ೧೭,೫೦೦ ರೂ.ಮೌಲ್ಯದ ೫ ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಮನೆಯ ಮಾಲೀಕ ಸಂತ್ರಾಸವಾಡಿಯ ಮಹ್ಮದ್ ಅಯ್ಯೂಬ್ ಓಡಿ ಹೋಗಿದ್ದ. ಅಕ್ಕಿಯನ್ನ ಸರ್ಕಾರಿ ಗೋದಾಮಿಗೆ ಕಳುಹಿಸಲಾಗಿದೆ. ದಾಳಿಯಲ್ಲಿ ಆಹಾರ ಇಲಾಖೆ ಸಿಬ್ಬಂದಿ ಶಿವಕುಮಾರ ಪೂಜಾರಿ, ಎಂ.ಬಿ.ನಗರ ಪೊಲೀಸ್ ಠಾಣೆ ಸಿಬ್ಬಂದಿ ಸಂತೋಷ ಇದ್ದರು. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.