5 ಕೆಜಿ ಕ್ಯಾನ್ಸರ್​ ಗಡ್ಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

mannur (1)
Published on

ಕಲಬುರಗಿ: ೫೨ ರ‍್ಷದ ಮಹಿಳೆ ಹೊಟ್ಟೆಯಲ್ಲಿ ಬೆಳೆದಿದ್ದ ೫ ಕೆ.ಜಿ (೨೫*೨೨ಸೆ.ಮೀ) ಗಡ್ಡೆಯನ್ನು ಪತ್ತೆ ಹಚ್ಚಿ, ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ, ಹೊರತೆಗೆದು ಗುಣಮುಖ ಮಾಡಲಾಗಿದೆ ಎಂದು ಮನ್ನೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಾರೂಕ್​ ಮನ್ನೂರ ತಿಳಿಸಿದರು.

ಯಾದಗಿರಿ ಜಿಲ್ಲೆಯ ರಂಗಪೇಟೆಯ ೫೨ ರ‍್ಷದ ಗುರುಬಾಯಿ ಅವರಿಗೆ ಅಂಡಾಶಯದ ಕ್ಯಾನ್ಸರ್​ ಆಗಿತ್ತು. ಮಹಿಳೆ ನಾಲ್ಕಾರು ದಿನಗಳಿಂದ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ತಪಾಸಣೆ ನಡೆಸಿದ ವೈದ್ಯರ ತಂಡಕ್ಕೆ ಕ್ಯಾನ್ಸರ್​ ಲಕ್ಷಣಗಳು ಗೋಚರವಾಗಿದ್ದವು. ತಕ್ಷಣ ಸ್ಪಂದಿಸಲಾಗಿದೆ ಎಂದು ನಗರದ ಬ್ಯಾರಿ ಹಿಲ್ಸ್​ನಲ್ಲಿರುವ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಗಿಗೆ ಕ್ಯಾನ್ಸರ್​ ಇರುವುದು ಗಮನಕ್ಕೆ ಬಂದ ತಕ್ಷಣ ಆಸ್ಪತ್ರೆಯ ರ‍್ಭಕೋಶದ ಕ್ಯಾನ್ಸರ್​ ತಜ್ಞೆ ಡಾ.ಸುಮಯಾ ಸನಾ ಅವರು, ತಪಾಸಣೆ ನಡೆಸಿ, ಎಂಆರ್​ಐ ಸ್ಕಾ$್ಯನ್​ ಮಾಡಿದಾಗ ಕ್ಯಾನ್ಸರ್​ ಗಡ್ಡೆ ಇರುವುದು ದೃಢಪಟ್ಟಿತ್ತು. ಕರಳು, ಮೂತ್ರ ಚೀಲದ ಸೂಕ್ಷ$್ಮತೆ, ೫೨ ವಯಸ್ಸು, ರಕ್ತದ ಕೊರತೆ ಇತ್ತು. ತೀವ್ರ ಕ್ಲಿಷ್ಟಕರ ಮತ್ತು ಸವಾಲು ಎದುರಾಗಿತ್ತು. ಈ ಮಧ್ಯೆ ಸವಾಲು ಸ್ವೀಕರಿಸಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೆರವೇರಿಸಲಾಗಿದೆ. ಮೆಟ್ರೋ ಸಿಟಿಗಳಲ್ಲಿ ೧೦ ಲಕ್ಷದವರೆಗೆ ಬರುತ್ತಿದ್ದ ಶಸ್ತ್ರ ಚಿಕಿತ್ಸಾ ವೆಚ್ಚ ಒಂದುವರೆಗೆ ಎರಡು ಲಕ್ಷದಲ್ಲಿ ಮಾಡಲಾಗಿದೆ ಎಂದರು.

ಸ್ತ್ರಿರೋಗ ಕ್ಯಾನ್ಸರ್​ ತಜ್ಞೆ ಡಾ. ಸುಮಯಾ ಸನಾ ಮಾತನಾಡಿ, ಸುಮಾರು ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ಮಾಡಿದ್ದು, ಗಡ್ಡೆಯೂ ಹೊಟ್ಟೆಯಲ್ಲಿ ಮಿತಿ ಮೀರಿ ಬೆಳೆದಿತ್ತು. ಇದರಿಂದ ಅನ್ನನಾಳ, ಮೂತ್ರನಾಳ, ರಕ್ತನಾಳ ಸೇರಿ ದೇಹದ ಯಾವುದೆ ಒಂದು ಅಂಗಕ್ಕೆ ತಗುಲಿದರು ಕೂಡ ಹೆಚ್ಚಿನ ಹಾನಿಯ ಅಪಾಯವಿತ್ತು. ಆದರೆ ವೈದ್ಯರ ತಂಡ ಅದೆಲ್ಲವನ್ನು ಮೆಟ್ಟಿ ನಿಂತು ಚಿಕಿತ್ಸೆ ಸರಿಯಾದ ಪ್ರಮಾಣದಲ್ಲಿ ಮಾಡಿದ್ದು, ಕೇವಲ ಆರು ದಿನಗಳಲ್ಲಿ ಮಹಿಳೆಯನ್ನು ಗುಣಮುಖ ಮಾಡಿ, ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅರವಳಿಕೆ ತಜ್ಞರಾದ ಸತೀಶ ಶರಣಪ್ಪ, ಪ್ಯಾಥೊಲೊಜಿಸ್ಟ ಡಾ.ಜೀನತ್​, ಡಾ.ಇಸ್ಮಾಯಿಲ್​ ಚಾಂದ್​, ವಿಕಿ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net