5 ಕಿ.ಮೀ ಮ್ಯಾರಥಾನ ಸ್ಪರ್ಧೆಗೆ ಡಿಸಿ, ಸಿಇಓ ಚಾಲನೆ

bkt-10-1
Published on

ಬಾಗಲಕೋಟೆ: ಎಚ್.ಐವಿ ತಡೆಗಟ್ಟಲು ತೀರ್ವಗೊಳಿಸಿದ ಐ.ಇ.ಸಿ ಪ್ರಚಾರಾಂದೋಲ-24 ಅಂಗವಾಗಿ ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಹಮ್ಮಿಕೊಂಡ 5 ಕಿ.ಮೀ ಮ್ಯಾರಾಥಾನ್ ಸ್ಪರ್ಧೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಜಂಟಿಯಾಗಿ ಚಾಲನೆ ನೀಡಿದರು.

ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಕ್ರೀಡಾ ಇಲಾಖೆ, ಬವಿವ ಸಂಘದ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಹಾಗೂ ರೆಡ್ ರಿಬ್ಬನ್ ಕ್ಲಬ್‍ಗಳು ಸಹಯೋಗದಲ್ಲಿ ಹಮ್ಮಿಕೊಂಡ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಈ ಸ್ಪರ್ಧೆಯ ಉದ್ದೇಶ ಹೆಚ್.ಐ.ವ್ಹಿ, ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವಿಕರ, ಹೆಚ್‍ಐವಿ ಮತ್ತು ಏಡ್ಸ್ (ತಡೆ) ಕಾಯ್ದೆ 2017 ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್.ಟಿ.ಐ. ಇತ್ಯಾದಿ ವಿಷಯಗಳ ಬಗ್ಗೆ ವಿಧ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಅಧಿಕಾರಿಗಳಾದ ಡಾ.ಸುವರ್ಣಾ ಕುಲಕರ್ಣಿ ಮಾತನಾಡಿ ಯುವಜನರಿಗಾಗಿ ಹಮ್ಮಿಕೊಂಡ ಮ್ಯಾರಾಥಾನ ಸ್ಫರ್ಧೆ, ಸ್ಪರ್ಧೆಗೆ ಸೀಮೀತವಾಗಿಲ್ಲ. ಇದು ಹೆಚ್.ಐ.ವಿ ಜಾಗೃತಿಗಾಗಿ ಹಾಗೂ ಎಲ್ಲಾ ಯುವಕ ಮತ್ತು ಯುವತಿಯರು ಹಚ್,ಐ.ವ್ಹಿ ಯಿಂದ ದೂರವಿರಿ ಮತ್ತು ಹೆಚ್.ಐ.ವ್ಹಿ ಮುಕ್ತ ಜಿಲ್ಲೆಯನ್ನು ಮಾಡಲು ನಾವು ನೀವೆಲ್ಲಾ ಸೇರಿ ಶ್ರಮಿಸೋಣ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸತತವಾಗಿ 2 ತಿಂಗಳುಗಳ ಕಾಲ ಈ ಬಗ್ಗೆ ಜನಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮ್ಯಾರಥಾನ್ ಸ್ಪರ್ಧೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಎ.ಪಿ.ಎಮ್.ಸಿ, ಕುಮಾರೇಶ್ವರ ಆಸ್ಪತ್ರೆ ಮೇನ್ ಗೆಟ್ ಮುಂದೆ ಸಾಗಿ, ರೋಟರಿ ಸರ್ಕಲ್, ಮಹಾರಾಜಾ ಗಾರ್ಡನ್ ಮಾರ್ಗವಾಗಿ ಸಾಗಿ, ಬೈಪಾಸ್ ರಸ್ತೆ ಮುಖಾಂತರ ಅಬಕಾರಿ ಇಲಾಖೆ ಮುಂಬಾಗ ನಂತರ ಜಿಲ್ಲಾ ಆಡಳಿತ ಭವನಕ್ಕೆ ಮುಕ್ತಾಗೊಂಡಿತು. ಈ ಸ್ಪರ್ಧೆಯಲ್ಲಿ ಜಿಲ್ಲೆಯ 17 ರಿಂದ 25 ವಯಸ್ಸಿನ ಪದವಿ, ಸ್ನಾತಕೋತ್ತರ, ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮ್ಯಾರಾಥಾನ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಶಶಿಕಲಾ ಶಿನ್ನೂರ, ಉಪ ಆರೋಗ್ಯ ಶಿಕ್ಷಣ ಅಧಿಕಾರಿ ಶ್ರೀಕಾಂತ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಬಿ.ಎಲ್ ಹೊಸಳ್ಳಿ, ನಾಯ್ಕರ್, ಎಮ್.ಹೆಚ್ ಸುಭೇದಾರ, ಹೆಚ್.ಆರ್.ಮರ್ಧಿ ಮತ್ತು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದ್ದಿವರ್ಗದವರು ಹಾಗೂ ಯುವಜನಸೇವೆ ಹಾಗೂ ಕ್ರೀಡಾ ಇಲಾಖೆ ತರಬೇತುದಾರರಾದ ಅನಿತಾ ನಿಂಬರಗಿ ಹಾಗೂ ವಿದ್ಯಾರ್ಥಿಗಳು ವಿವಿಧ ಮಹಾವಿದ್ಯಾಲಯದ ಉಪನ್ಯಾಕರುಗಳು, ಎಲ್ಲಾ ತಾಲೂಕಿನ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net