ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಮೃತ್ಯು

Web Iren
Published on

ಬ್ರಹ್ಮಾವರ: ಉಡುಪಿ ಜಿಲ್ಲೆಯ ಉಪ್ಪೂರಿನ ಕೆ.ಜಿ.ರೋಡ್ ಸಮೀಪ ನೀರಿನ ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಬುಧವಾರ ಸಂಜೆ ಮೃತಪಟ್ಟಿದ್ದಾನೆ.

ಕುವೈಟ್ ನಿವಾಸಿಗಳಾದ ನಾರ್ಮನ್ ಹಾಗೂ ಸಿಲ್ವಿಯಾ ಲೀವಿಸ್ ದಂಪತಿಯ ಪುತ್ರ ಲಾರೆನ್ ಲೂವಿಸ್(5) ಮೃತಪಟ್ಟ ಬಾಲಕ.

ಸಂಜೆ ಮನೆಯಲ್ಲಿ ಬಾಲಕ ಕಾಣಿಸದ ಹಿನ್ನೆಲೆಯಲ್ಲಿ ಮನೆ ಮಂದಿ ಎಲ್ಲ ಕಡೆ ಹುಡುಕಾಡಿದ್ದು, ಪತ್ತೆಯಾಗಿರಲಿಲ್ಲ. ಗುರುವಾರ ಬೆಳಗ್ಗೆ ಮನೆಯ ಹಿಂಬದಿ ಇರುವ ತೋಟದ ಸಮೀಪದ ನೀರಿನ ಹೊಂಡದಲ್ಲಿ ಬಾಲಕನ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.

ರಜೆ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಬಂದಿದ್ದ ಬಾಲಕ ಜುಲೈ 4ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net