

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಉಪನಗರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಕಳ್ಳತನವಾಗಿದ್ದ 5 ಬೈಕ್‌ಗಳನ್ನು ಶುಕ್ರವಾರ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಪನಗರ ಠಾಣೆ ವ್ಯಾಪ್ತಿಯಲ್ಲಿ 5 ಬೈಕ್‌ಗಳನ್ನು ಕದ್ದಿದ್ದ ಚಾಲಾಕಿಗಳು, ಕೆಲ ಬೈಕ್‌ಗಳ ನಂಬರ್ ಪ್ಲೇಟ್ ಕಿತ್ತು ಹಾಕಿದ್ದರೆ, ಮತ್ತೆ ಕೆಲ ಬೈಕ್‌ಗಳಿಗೆ ನಕಲಿ ನಂಬರ್ ಪ್ಲೇಟ್ ಹಾಕಿ ನಗರ ವ್ಯಾಪ್ತಿಯಲ್ಲೇ ಚಾಲನೆ ಮಾಡುತ್ತಿದ್ದರು. ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಸಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಸಂಶಯ ಬಂದ ಹಿನ್ನೆಲೆಯಲ್ಲಿ ಒಬ್ಬನನ್ನು ತಪಾಸಣೆ ಮಾಡಿದಾಗ 5 ಬೈಕ್‌ಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮಾಲೀಕರಿಗೆ ಬೈಕ್‌ಗಳ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಪಿಎಸ್‌ಐಗಳಾದ ರುದ್ರಪ್ಪ ಗುಡದರಿ, ವಿ.ಐ. ಬಳ್ಳಾರಿ, ಸಿಬ್ಬಂದಿ ದಯಾನಂದ ಗುಂಡಗೈ, ಮುಸ್ತಫಾ ಬೀಳಗಿ, ಅಶೋಕ ಮುಡಸಿ, ರುದ್ರಪ್ಪ ಭಿಸೆ, ನಾಗರಾಜ ವಡ್ಡಪ್ಪಗೋಳ, ಪ್ರದೀಪ ಕುಂದಗೋಳ, ಹನುಮಂತ ಜಟ್ಟನ್ನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.