ಸಾರಿಗೆ ಬಸ್-ಎರಡು ಬೈಕ್ ನಡುವೆ ಅಪಘಾತ; ಸ್ಥಳದಲ್ಲೇ ಐವರು ದುರ್ಮರಣ

ವಿಜಯವಾಣಿ - 2025-03-11T173505.505
Published on

ರಾಯಚೂರು: ಸಾರಿಗೆ ಬಸ್ ಮತ್ತು ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಂಧ್ರದ ಪೆದ್ದ ತುಂಬಳಮಂ ಬಳಿ ಮಂಗಳವಾರ (ಮಾ.11) ಸಂಭವಿಸಿದೆ.

ಗಂಗಾವತಿಯಿಂದ ಕರ್ನೂಲ್ ಜಿಲ್ಲೆಯ ಆದೋನಿಗೆ ತೆರಳುವಾಗ ಮಾರ್ಗ ಮಧ್ಯೆ ಅದೋನಿಯಿಂದ ಎರಡು ಬೈಕ್ ತೆರಳುವ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಎರಡು ಬೈಕ್​ನಲ್ಲಿದ್ದ ಒಟ್ಟು 5 ಜನ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ.

ಬಸ್​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಂಧ್ರದ ಇಬ್ಬರು ಮತ್ತು ಮಾನ್ವಿಯ ಮೂರು ಜನ ಮೃತಪಟ್ಟಿದ್ದಾರೆ.

ಈ ಕುರಿತು ಮಾದವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net