

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಿಂಚರಕಿ ಗ್ರಾಮದಲ್ಲಿ 5 ಆಂಗಡಿಗಳ ಬೀಗ ಮುರಿದು ಕಳುವು ಮಾಡಿದ ಘಟನೆ ಗುರುವಾರ ನಡೆದಿದೆ.
ಗ್ರಾಮದ ಮೊಬೈಲ್ ಅಂಗಡಿಯಲ್ಲಿ 13 ಸಾವಿರ ನಗದು, 15 ಸಾವಿರ ಮೌಲ್ಯದ ಮೊಬೈಲ್, ಎಲೆಕ್ಟಿಕಲ್ ಅಂಗಡಿಯಲ್ಲಿ 9 ಸಾವಿರ ನಗದು, ಅಕ್ಕಿ ಅಂಗಡಿಯಲ್ಲಿ 5 ಸಾವಿರ ನಗದು ಹಾಗೂ ಇನ್ನೊಂದು ಮೊಬೈಲ್ ಅಂಗಡಿಯಲ್ಲಿ 2 ಸಾವಿರ ನಗದು ಮತ್ತು 15 ಸಾವಿರ ಮೌಲ್ಯದ ಎರಡು ಮೊಬೈಲ್ ದೋಚಿದ್ದಾರೆ. ಆಟೊ ಗ್ಯಾರೇಜ್ ಮತ್ತು ಆಟೊಮೊಬೈಲ್ ಅಂಗಡಿಗಳ ಬೀಗ ಮುರಿದು ಯಾವುದೇ ನಗದು ಇಲ್ಲದೇ ಬರಿಗೈಲಿ ಹೋಗಿದ್ದಾರೆ ಎಂದು ಅಂಗಡಿಗಳ ಮಾಲೀಕರು ತಿಳಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಸಿರವಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.