ಶೇ.5 ಮೀಸಲು ಅನುದಾನ ಬಳಕೆಗೆ ಸೂಚಿಸಿ

Snd Memorandam
ಸಿಂಧನೂರಿನಲ್ಲಿ ಶಿರಸ್ತೇದಾರ್ ಪಾರ್ವತಿ ಹಿರೇಮಠಗೆ ಅಂಗವಿಕಲರ ಸಂಘ ಮನವಿ ಸಲ್ಲಿಸಿತು. ಪ್ರಮುಖರಾದ ಹುಸೇನಸಾಬ್ ಪರಾಪುರ, ಬಸವರಾಜ ಗೊರೇಬಾಳ, ಬೀರಪ್ಪ ಗೊರೇಬಾಳ, ಯಮನಪ್ಪ ಬೆಳಗುರ್ಕಿ, ಹನುಮಂತ ಸಾಸಲಮರಿ ಇತರರಿದ್ದರು.
Published on

ಸಿಂಧನೂರು: ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಶೇ.5 ಅನುದಾನ ಬಳಕೆಗೆ ಸೂಚನೆ ನೀಡುವಂತೆ ಒತ್ತಾಯಿಸಿ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಹಾಗೂ ಅಂಗವಿಕಲರ ಸಂಘದ ತಾಲೂಕು ಘಟಕದಿಂದ ತಹಸಿಲ್ ಕಚೇರಿ ಶಿರಸ್ತೇದಾರ್ ಪಾರ್ವತಿ ಹಿರೇಮಠಗೆ ಮನವಿ ಸಲ್ಲಿಸಲಾಯಿತು.

ಕಳೆದ ಮೂರ‌್ನಾಲ್ಕು ವರ್ಷಗಳಿಂದ ಗ್ರಾಪಂಗಳಲ್ಲಿ ಅನುದಾನ ಖರ್ಚು ಮಾಡುತ್ತಿಲ್ಲ. ಅಂಗವಿಕಲರಿಗೆ ಸೌಲಭ್ಯ ನೀಡಲು ಪಿಡಿಒಗಳು ಮುಂದಾಗುತ್ತಿಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಿ ಗ್ರಾಪಂಗಳಲ್ಲಿ ಕೆಲಸ ಮಾಡುವ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃಗಳಿಗೆ ಪ್ರತಿ ವರ್ಷ 12 ಸಾವಿರ ರೂ. ಸ್ಟೇಷನರಿ ವೆಚ್ಚ, ಸಾರಿಗೆ ವೆಚ್ಚ ನೀಡಲು ಆದೇಶಿಸಬೇಕು. ಗ್ರಾಪಂಗಳಲ್ಲಿ ಇ-ಹಾಜರಾತಿ ಕೊಡಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಹುಸೇನಸಾಬ್ ಪರಾಪುರ, ಉಪಾಧ್ಯಕ್ಷ ಬಸವರಾಜ ಗೊರೇಬಾಳ, ಪ್ರಮುಖರಾದ ಬೀರಪ್ಪ ಗೊರೇಬಾಳ, ಯಮನಪ್ಪ ಬೆಳಗುರ್ಕಿ, ಹನುಮಂತ ಸಾಸಲಮರಿ, ಚಂದಪ್ಪ ಪಗಡದಿನ್ನಿ, ಹನುಮಂತ ಗಿಣಿವಾರ, ದಾವಲಸಾಬ್ ಉಮಲೂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net