ಕಂಟೇನರ್‌ನಲ್ಲಿದ್ದ ಸಾಗಿಸುತ್ತಿದ್ದ 5 ಲಕ್ಷದ ಮದ್ಯ ವಶ

liquor seized
Published on

ಕಾರವಾರ: ಗೋವಾದಿಂದ ಮಂಗಳೂರಿಗೆ ಸಾಗಿಸುತಿದ್ದ 5 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವನ್ನು ಅಬಕಾರಿ ಅಧಿಕಾರಿಗಳು ಕಾರವಾರದ ಮಾಜಾಳಿ ತನಿಖಾ ಠಾಣೆಯಲ್ಲಿ ಗುರುವಾರ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರು ಮೂಲದ ವಾಹನ ಚಾಲಕ ಮಹ್ಮದ್ ಸಲೀಮ್ ಸದಾಶಿವಗಡದ ತೇಜಸ್ ಶೇಟ್ ಬಂಧಿತರು. 58 ಬಾಕ್ಸ್ ಗಳಲ್ಲಿ ಕೊಂಡೊಯ್ಯಲಾಗುತ್ತಿತ್ತು. ಅಬಕಾರಿ ಉಪ ಆಯುಕ್ತರಾದ ಕೆ. ವಿನೋದ್ ಕುಮಾರ್ ನೇತ್ರತ್ವದಲ್ಲಿ ಉಪ ಅಧೀಕ್ಷಕ ಬಸವರಾಜ್ ಕರವಿನ ಕೊಪ್ಪ,ಅಬಕಾರಿ ನಿರೀಕ್ಷಕ ಸದಾಶಿವ ಕೊರತಿ,ಅಬಕಾರಿ ಉಪ ನಿರೀಕ್ಷರಾದ ಪಿ.ಕೆ.ಹಳದನಕರ್,ಎಂ.ಎಂ. ನಾಯ್ಕ, ಸಿಬ್ಬಂದಿ ಸುರೇಶ ಹಾರುಗೊಪ್ಪ,ಆನಂದ ಪೋಂಡೆಂಜರ್, ರಂಜನಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಗೋವಾ-ಕಾರವಾರ ನಡುವೆ ಕಳೆದ ಒಂದು ವಾರದಲ್ಲಿ ಚೆಕ್ ಪೋಸ್ಟ್ನಲ್ಲಿ 4 ವಾಹನಗಳನ್ನು ಜಪ್ತು ಮಾಡಿ 5 ಜನರನ್ನು ಬಂಧಿಸಿ, 1 ಕೋಟಿ ರೂ. ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net