

ಹುಬ್ಬಳ್ಳಿ: ಮೇಲ್ಚಾವಣಿ ಕುಸಿದು ಮೃತಪಟ್ಟ ಬಾಲಕಿಯ ನಿವಾಸಕ್ಕೆ ಭಾನುವಾರ ತೆರಳಿದ ಶಾಸಕ ಎಂ.ಆರ್. ಪಾಟೀಲ ಅವರು ಕುಟುಂಬದವರಿಗೆ 5 ಲಕ್ಷ ರೂ. ನೆರವಿನ ಚೆಕ್ ವಿತರಿಸಿ, ಸಾಂತ್ವನ ಹೇಳಿದರು.
ಕಳೆದ ಮೂರು ದಿನಗಳ ಹಿಂದೆ ಕುಂದಗೋಳ ಪಟ್ಟಣದಲ್ಲಿ ಆಟವಾಡಲು ಪಕ್ಕದ ಮನೆಗೆ ತೆರಳಿದ್ದ ಬಾಲಕಿ ಮೇಲೆ ಮನೆಯ ಮೇಲ್ಚಾವಣಿ ಕುಸಿದು ಬಾಲಕಿ ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್. ಪಾಟೀಲ ಅವರು ಸರ್ಕಾರದಿಂದ ದೊರೆತ 5 ಲಕ್ಷ ರೂ. ಚೆಕ್ ವಿತರಿಸಿದರು.
ತಹಸೀಲ್ದಾರ್ ರಾಜು ಮಾವರಕರ, ಪಟ್ಟಣ ಪಂಚಾಯಿತಿ ಸದಸ್ಯರಾದ ವಾಗೀಶ ಗಂಗಾಯಿ, ಮಂಜು ಹಿರೇಮಠ, ಪ್ರವೀಣ ಬಡ್ನಿ, ಸುಭಾಷ ಸಾದರ, ಮುಖಂಡರಾದ ಬಿ.ಟಿ. ಗಂಗಾಯಿ, ಮಾಲತೇಶ ಶ್ಯಾಗೋಟಿ, ಸತೀಶ ಪಾಟೀಲ, ಉಮೇಶ ಹೆಬಸೂರು, ರವಿಗೌಡ ಪಾಟೀಲ, ರವಿ ಶಿರಸಂಗಿ, ನಾಗರಾಜ ಸುಬರಗಟ್ಟಿ, ಸಿದ್ದು ಧಾರವಾಡ ಶೆಟ್ಟರ, ನಾಗರಾಜ ದೇಶಪಾಂಡೆ ಇತರರು ಇದ್ದರು.