ಕಾರು ಗ್ಲಾಸ್ ಒಡೆದು 5 ಲಕ್ಷ ರೂ. ಅಪಹರಣ

Crime Logo
Published on

ಚಿತ್ರದುರ್ಗ: ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ 5 ಲಕ್ಷ ರೂ. ಗಳನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ಶನಿವಾರ ಹಾಡು-ಹಗಲೇ ನಡೆದಿದೆ.

ಮಧ್ಯಾಹ್ನ 2ರ ಸಮಯದಲ್ಲಿ ಜಿಲ್ಲಾ ನ್ಯಾಯಾಲಯದ ಬಳಿ ವ್ಯಕ್ತಿಯೊಬ್ಬರು ತಮ್ಮ ಕಾರು ನಿಲ್ಲಿಸಿ, ಸಮೀಪದಲ್ಲಿದ್ದ ತಮ್ಮ ಸ್ನೇಹಿತರನ್ನು ಮಾತನಾಡಿಸಿಕೊಂಡು ಹಿಂತಿರುಗಿ ಬರುವುದರೊಳಗೆ ಈ ಕೃತ್ಯ ನಡೆದಿದೆ.

ಕಾರಿನ ಕಿಟಕಿ ಗ್ಲಾಸ್‌ನ್ನು ಒಡೆಯಲಾಗಿದ್ದು, ಇದಕ್ಕೆ ಯಾವುದೋ ಕೆಮಿಕಲ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಕುರಿತಂತೆ ದೂರು ದಾಖಲಾಗಿಲ್ಲ. ಹಣ ಕಳೆದುಕೊಂಡವರು ದೂರು ನೀಡಿದರೆ ದಾಖಲಿಸಿಕೊಂಡು, ತನಿಖೆ ನಡೆಸುವುದಾಗಿ ಪಿಐ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net