ಲಾಭದಾಸೆ ತೋರಿಸಿ 5 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ವಿಜನ್ ಗ್ಲೋಬಲ್ ಇನ್​ವೆಸ್ಟ್​ಮೆಂಟ್ ಎಲ್​ಎಲ್​ಸಿಯ ಟ್ರೇಡ್ ಮಾರ್ಕೆಟಿಂಗ್​ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಗಳಿಸಬಹುದೆಂದು ನಂಬಿಸಿ, ಧಾರವಾಡದ ಕೆಲಗೇರಿಯ ಗಂಗಾಧರ ಎಂಬುವರಿಂದ ಆನ್​ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದರ ಕುರಿತು ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚಕರು, ವಾಟ್ಸ್​ಆಪ್ ಮೂಲಕ ಎಂಟಿಎಸ್5 ಎಂಬ ಆಪ್ ರವಾನಿಸಿದ್ದಾರೆ. ನಂತರ 2 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಪ್ರತಿ ತಿಂಗಳು 12 ಸಾವಿರ ರೂ.ನಂತೆ ಮೂರು ತಿಂಗಳು ಲಾಭ ಕೊಟ್ಟು ನಂಬಿಸಿದ್ದಾರೆ. ನಂತರ 3 ಲಕ್ಷ ರೂ. ಹಣ ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಹೀಗೆ ಒಟ್ಟು 5 ಲಕ್ಷ ರೂ. ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ ಎಂದು ಗಂಗಾಧರ, ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net