

ಹುಬ್ಬಳ್ಳಿ: ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ ಆಗಂತಕರು, ವರ್ಕ್ ಫ್ರಮ್ ಹೋಂ ಸಂದೇಶದ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 5.06 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ರೋಹಿತ್ ವಂಚನೆಗೆ ಒಳಗಾದವರು. ಮೊದಲು ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿ ನಂತರ ಹೂಡಿಕೆ ಮಾಡಿ ಲಾಭ ಗಳುಹಿಸಬಹುದೆಂದು ನಂಬಿಸಿದ್ದಾರೆ. ಮೊದಲು ಕೆಲ ಟಾಸ್ಕ್ ಕೊಟ್ಟು ಅದಕ್ಕೆ ಲಾಭ ಕೊಟ್ಟಿದ್ದಾರೆ. ನಂತರ ವಿವಿಧ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡಿದ್ದು, ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.