

ಹುಬ್ಬಳ್ಳಿ: ವ್ಯಾಪಾರ-ವಹಿವಾಟಿನಲ್ಲಿ ಹಣ ಹೂಡಿಕೆ ಮಾಡಿದರೆ ಅತ್ಯಧಿಕ ಲಾಭಗಳಿಸಬಹುದೆಂದು ನಗರದ ವ್ಯಕ್ತಿಯೊಬ್ಬರನ್ನು ನಂಬಿಸಿದ ವಂಚಕರು, 5 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ಬಸವರಾಜ ವಂಚನೆಗೆ ಒಳಗಾದವರು. ತಮಿಳುನಾಡು ಮೂಲದ ದುಬೈವಾಸಿ ವೆಂಕಟೇಶನ್ ಮುನಿರತ್ನಂ ಎಂಬಾತ ವಂಚಿಸಿದ್ದಾನೆ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ಟ್ರೇಡಿಂಗ್ ಮಾಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿದ್ದಾನೆ. ನಂತರ ವಿವಿಧ ಖಾತೆಗಳಿಂದ 5 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.