ಎಸ್‌ಟಿ ಮೀಸಲಾತಿ ಸಮಾವೇಶಕ್ಕೆ 5 ಲಕ್ಷ ಜನ, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಾಹಿತಿ ದೇವನಹಳ್ಳಿಯಲ್ಲಿ ಕುರುಬ ಸಮಾಜದ ಪೂರ್ವಭಾವಿ ಸಭೆ

J.25 Dhl Kurubara sangha News ph-2 C
Published on

ದೇವನಹಳ್ಳಿ: ಮಾದಾವರ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶ್ರೀ ನಿರಂಜನಾನಂದ ಸ್ವಾಮೀಜಿ ನೇತೃತ್ವದಲ್ಲಿ ೆ.7ಕ್ಕೆ ನಿಗದಿಯಾಗಿರುವ, ಕುರುಬ ಸಮುದಾಕ್ಕೆ ಎಸ್‌ಟಿ ಮೀಸಲಾತಿಗೆ ಆಗ್ರಹಿಸುವ ಸಮಾವೇಶದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ 5 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ತಾಲೂಕು ಕುರುಬ ಸಮಾಜದ ಜತೆ ಸೋಮವಾರ ಏರ್ಪಡಿಸಿದ್ದ ಸಮಾವೇಶ ಹಾಗೂ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮುಂದಿನ ಪೀಳಿಗೆಯವರಿಗೆ ಏನಾದರೂ ಕೊಡುಗೆ ನೀಡಬೇಕಾಗಿದೆ. ಇದಕ್ಕಾಗಿ ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು.

ಕುರುಬ ಎಂದರೆ ಬೆಟ್ಟಗುಡ್ಡಗಳಲ್ಲಿ ವಾಸಮಾಡುವವನು. ಮೂಲನಿವಾಸಿಗಳಾದ ಕುರುಬರು ಕುರಿ ಕಾಯುತ್ತಾ ಜೀವನ ಸಾಗಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಸಮಾಜದ ಮುಖ್ಯವಾಹಿನಿಯಲ್ಲಿದ್ದಾರೆ. ಜನಾಂಗದವರು ಈಗಲೂ ಗುಡಿಸಲುಗಳಲ್ಲಿ ವಾಸಮಾಡುವುದನ್ನು ಕಂಡಿದ್ದೇವೆ. ಆದ್ದರಿಂದ ಎಸ್‌ಟಿ ಮೀಸಲಾತಿಯ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಬೇಕಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, 1936ರಿಂದಲೇ ನಮ್ಮ ಸಮುದಾಯದ ಉಪ ಪಂಗಡಗಳಾದ ಕುರುಮನ್ಸ್, ಕಾಟ್ಟು, ನಾಕನ್, ಗೊಂಡ ಜಾತಿಗಳು ಪರಿಶಿಷ್ಟ ಜಾತಿ/ಪಂಗಡದಲ್ಲಿದ್ದವು. ಸ್ವಾತಂತ್ರ್ಯಾನಂತರದಲ್ಲಿ ಕಾಡುಕುರುಬ, ಜೇನುಕುರುಬ, ಗೊಂಡ, ಕುರುಮಾನ್ಸ್, ಕಾಟ್ಟುನಾಯಕನ್, ಕುರುಂಬನ್, ಕುರುಬ ಪದಗಳು ಆಯಾ ಪ್ರಾಂತ್ಯದಲ್ಲಿ ಪರಿಶಿಷ್ಟ ಪಂಗಡದಲ್ಲಿದ್ದವು. ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಬೃಹತ್ ಸಮಾವೇಶ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಎಸ್‌ಟಿಗೆ ಸೇರ್ಪಡೆಗೆ ಆಗ್ರಹಿಸಿ ಕಾಗಿನೆಲೆಯಿಂದ ಆರಂಭಿಸಿರುವ ಪಾದಯಾತ್ರೆಯಲ್ಲಿ ಶ್ರೀ ನಿರಂಜನಾನಂದ ಸ್ವಾಮೀಜಿ ಇದುವರೆಗೆ 175 ಕಿ.ಮೀ. ಕ್ರಮಿಸಿ ಬೆಂಗಳೂರಿನತ್ತ ಬರುತ್ತಿದ್ದಾರೆ. ಜಿಲ್ಲೆಯಾದ್ಯಂತ ಇರುವ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.

ಪುರಸಭೆ ಸದಸ್ಯರಾದ ಜಿ.ಎ. ರವೀಂದ್ರ, ವೇಣುಗೋಪಾಲ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಪಿ. ರವಿಕುಮಾರ್, ಗೌರವಾಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ರವೀಂದ್ರ ದಿನ್ನೇಗೌಡ, ರವಿಕುಮಾರ್, ಜಿಪಂ ಸದಸ್ಯ ನಾಗರಾಜು, ಕುರುಬ ಸಂಘದ ರಾಜ್ಯ ನಿದೇರ್ಶಕಿ ಮಂಜುಳಾ, ಪದಾಧಿಕಾರಿಗಳಾದ ಮಹೇಶ್ವರಪ್ಪ, ಮಲ್ಲೇಶ್, ರಘುವೀರ್ ಮುನಿನಂಜಪ್ಪ ಮುನಿರಾಜು (ಬರ‌್ಮಾ) ಆವತಿ ನಾಗರಾಜ್, ಮಿಥುನ್, ಉಮೇಶ್, ನಂದಕುಮಾರ್, ಹರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net