ರುದ್ರಭೂಮಿ ಅಭಿವೃದ್ಧಿಗೆ 5 ಲಕ್ಷ ರೂ.: ವಿಶ್ರಾಂತ ಧಾಮ ಉದ್ಘಾಟಿಸಿ ಡಾ.ಭರತ್ ಶೆಟ್ಟಿ ಹೇಳಿಕೆ

Gur_RudraBhoomi
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಪ್ರತಿಯೊಬ್ಬರ ಜೀವನದ ಕೊನೆಯ ಕಾರ್ಯಕ್ರಮ ಸ್ಮಶಾನ ಅಥವಾ ರುದ್ರಭೂಮಿಯಲ್ಲಿ ನಡೆಯುತ್ತದೆ. ಸಾವಿನ ಮಹತ್ವ ಗೊತ್ತಾಗುವುದು ಚಿತೆಗೆ ಬೆಂಕಿ ಕೊಟ್ಟಾಗ. ಅದನ್ನು ‘ರುದ್ರ’ ನೋಡುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಸತ್ತವರ ಅಂತ್ಯ ಸಂಸ್ಕಾರ ಗೌರವಯುತವಾಗಿ ನಡೆಯಬೇಕು. ಈ ರುದ್ರಭೂಮಿಯ ಇನ್ನುಳಿದ ಅಭಿವೃದ್ಧಿ ಕೆಲಸಗಳಿಗೆ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂ. ಒದಗಿಸಲಾಗುವುದು ಎಂದು ಡಾ.ಭರತ್ ಶೆಟ್ಟಿ ಹೇಳಿದರು.

ಪಡುಪೆರಾರ ಪಂಚಾಯಿತಿ ವ್ಯಾಪ್ತಿಯ ಮೂಡುಪೆರಾರ ಗ್ರಾಮದಲ್ಲಿ ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ 30 ಲಕ್ಷ ರೂ. ವೆಚ್ಚದಲ್ಲಿ ಹಿಂದು ರುದ್ರಭೂಮಿಗಾಗಿ ನಿರ್ಮಿಸಿದ ನೂತನ ವಿಶ್ರಾಂತಿ ಧಾಮ, ಕಚೇರಿ ಮತ್ತು ಶಾಶ್ವತ ಚಪ್ಪರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಮೂಡುಬಿದಿರೆ ತಾಪಂ ಪ್ರಭಾರ ಸಹಾಯಕ ನಿರ್ದೇಶಕ ಸಾಯೀಶ್ ಚೌಟ ಮಾತನಾಡಿದರು.

ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಾಗಂದಡಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಪದ್ಮನಾಭ ಪೂಜಾರಿ ವರದಿ ಮಂಡಿಸಿದರು. ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಗೌಡ, ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಉದ್ಯಮಿ ಸನತ್ ಸೇಮಿತ ಕೈಕಂಬ, ವಾಸ್ತುತಜ್ಞ ರವಿಶಂಕರ್ ರಾವ್ ನೂಯಿ, ಪಡುಪೆರಾರ ಪಂಚಾಯಿತಿ ಸದಸ್ಯ ನೂರ್ ಅಹ್ಮದ್, ಪಡುಪೆರಾರ ಪಂಚಾಯಿತಿ ಸದಸ್ಯರಾದ ಅಮಿತಾ ಎಂ.ಶೆಟ್ಟಿ, ಯಶವಂತ ಪೂಜಾರಿ ಮುಂಡಬೆಟ್ಟು, ಸುಜಾತಾ, ವಿದ್ಯಾ ಜೋಗಿ, ಗಣೇಶ್, ದೇವಪ್ಪ ಶೆಟ್ಟಿ, ಪಿಡಿಒ ಉಗ್ಗಪ್ಪ ಮೂಲ್ಯ, ಮೋನಪ್ಪ ಬಂಗೇರ, ರಂಗನಾಥ ಭಂಡಾರಿ ಮುಂಡಬೆಟ್ಟುಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ರುದ್ರಭೂಮಿಯ ಸೇವಕ ಶಂಕರ್ ಹಾಗೂ ನಿರ್ವಹಣಾ ಸಮಿತಿ ಕಾರ್ಯದರ್ಶಿ ಪದ್ಮನಾಭ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಕೋಶಾಧಿಕಾರಿ ಸುರೇಶ್ ಅಂಚನ್ ವಂದಿಸಿದರು.

ಆತ್ಮ ಶಾಶ್ವತ. ನಶ್ವರವಾದ ಈ ದೇಹಕ್ಕೆ ಯೋಗ್ಯ ರೀತಿಯಲ್ಲಿ ಮುಕ್ತಿ ಕಾಣಿಸುವುದು ಮನುಷ್ಯನ ಕರ್ತವ್ಯ. ಶವ ಸಂಸ್ಕಾರ ಅಥವಾ ಸದ್ಗತಿ ಕಾಣಿಸುವುದು ಮನುಷ್ಯ ಸಂಕುಲದಲ್ಲಿ ಮಾತ್ರ. ರುದ್ರಭೂಮಿ ಅಭಿವೃದ್ಧಿ ನಿಟ್ಟಿನಲ್ಲಿ ಸಮಿತಿಯ ಬೇಡಿಕೆ ಪೂರೈಸಲು ಸರ್ಕಾರಿ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಮಹೇಶ್ ಕುಮಾರ್ ಹೊಳ್ಳ, ಮಂಗಳೂರು ತಾಪಂ ಕಾರ್ಯನಿರ್ವಹಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net