ಒಳಾಂಗಣ ಕ್ರೀಡಾಂಗಣಕ್ಕೆ 5 ಕೋಟಿ ರೂ.

15MDG2
Published on

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ವಿುಸಲು ಅಂದಾಜು 5 ಕೋಟಿ ರೂಪಾಯಿಯ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹನಿರ್ದೇಶಕ ಬಿ.ಬಿ. ವಿಶ್ವನಾಥ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದ ಮಹಾದ್ವಾರ ನಿರ್ವಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದ ಎದುರು ಈಗ ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ಜಗದ್ಗುರು ಕ್ರೀಡಾಂಗಣ ಮಹಾದ್ವಾರ ನಿರ್ವಿುಸಲಾಗುತ್ತಿದೆ ಎಂದು ತಿಳಿಸಿದರು.

ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಮಾತನಾಡಿ, ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ನೀಡಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನಿನಲ್ಲಿ ವಿಶಾಲವಾದ ಕ್ರೀಡಾಂಗಣ ನಿರ್ವಣವಾಗಿದೆ. ಇದರಿಂದ ಕ್ರೀಡಾಸಕ್ತರಿಗೆ ತುಂಬಾ ಅನುಕೂಲವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರಿಗೆ ಪಾದಪೂಜೆ ಮಾಡಲಾಯಿತು. ಯುವಜನ ಮತ್ತು ಕ್ರೀಡಾ ಇಲಾಖೆ ತಾಲೂಕಾಧಿಕಾರಿ ಎಲ್.ಬಿ. ಹುಡೇದ, ಪ್ರಾಚಾರ್ಯರಾದ ಡಿ.ಸಿ. ಮಠ, ಸಿ.ಎಸ್. ಅರಸನಾಳ, ಎನ್.ಎನ್. ಹಲವಾಗಲಿ, ಆರ್.ಆರ್. ಹೆಗ್ಗಡಾಳ, ಎಂ.ಎಸ್. ಶಿವಶೆಟ್ಟರ್, ಎಸ್.ಬಿ. ಹಿರೇಮಠ, ಶಶಿಕಲಾ ಕುಕನೂರ, ಲತಾ ಹೊಸಳ್ಳಿ, ಎ.ಕೆ. ಮತ್ತೂರಮಠ, ಎನ್.ಎಸ್. ನರೇಗಲ್ಲ, ಕುಮಾರ ಕಲ್ಮಠ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net