ಲಾಭದಾಸೆಗೆ 5 ಕೋಟಿ ರೂ. ಕಳೆದುಕೊಂಡ ಉದ್ಯಮಿ

cybe crime
Published on

ಹುಬ್ಬಳ್ಳಿ: ಆರ್.ಬಿ. ಕ್ಯಾಪಿಟಲ್ ಫರ್ಮ್‌ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ. 20ರಷ್ಟು ಲಾಭ ಸಿಗಲಿದೆ ಎಂದು ನಂಬಿಸಿ, ನಗರದ ಉದ್ಯಮಿಯೊಬ್ಬರಿಂದ 5.47 ಕೋಟಿ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ನಗರದ ಸುರೇಶ ಜಿ. ಎಂಬುವವರು ವಂಚನೆಗೊಳಗಾದವರು. ರಿಷಿಕೇಶ್, ಯೋಗೇಶ, ಪುಣೆಯ ಮಂಗ್ಲೇಶ, ಜ್ಯೋತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗ್ಲೇಶನ ಮೂಲಕ ಪರಿಚಯವಾದ ರಿಷಿಕೇಶ ಮತ್ತು ಯೋಗೇಶ ಆರ್.ಬಿ. ಕ್ಯಾಪಿಟಲ್ ಫರ್ಮ್‌ನಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮೇಲೆ ಪ್ರತಿ ತಿಂಗಳು ಲಾಭ ನೀಡುವುದಾಗಿ ಸುರೇಶನನ್ನು ನಂಬಿಸಿದ್ದಾರೆ. ನಂತರ 5,47,55,000 ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net