ಕರು ಸೇರಿ 5 ಹಸುಗಳು ಸಾವು

8-KGL PHOTO-2,,
ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದ ಉಪ್ಪಾರ ಬಡಾವಣೆಯ ನಾಗ ಅವರ ಕೊಟ್ಟಿಗೆಯಲ್ಲಿ ಹಸುಗಳು ಮೃತಪಟ್ಟಿರುವುದು.
Published on

ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಮೇವು ತಿಂದು ಕೊಟ್ಟಿಗೆಯಲ್ಲಿ ಮಲಗಿದ್ದ 1 ಕರು ಸೇರಿದಂತೆ 5 ಹಸುಗಳು ಬೆಳಗಾಗುವಷ್ಟರಲ್ಲಿ ನಿಗೂಢವಾಗಿ ಮೃತಪಟ್ಟಿವೆ.

ಗ್ರಾಮದ ಮಹದೇವಶೆಟ್ಟಿ ಎಂಬುವರ ಪುತ್ರ ನಾಗ ಅವರ ಹಸುಗಳು ಮೃತಪಟ್ಟಿವೆ. ಗುರುವಾರ ರಾತ್ರಿ ತಮ್ಮ 2 ಕರು, 4 ಹಸುಗಳಿಗೆ ಮೇವು, ನೀರು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಅಲ್ಲಿವರೆಗೂ ಹಸುಗಳು ಲವಲವಿಕೆಯಿಂದ ಇದ್ದವು. ಎಂದಿನಂತೆ ಶುಕ್ರವಾರ ಬೆಳಗ್ಗೆ ಎಂದು ಕೊಟ್ಟಿಗೆಗೆ ಬಂದಾಗ 1 ಕರು ಸೇರಿದಂತೆ 5 ಹಸುಗಳು ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ತಿಳಿಸಿದೆ. ಈ ಬಗ್ಗೆ ಪಶು ವೈದ್ಯರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಶು ವೈದ್ಯ ಶಿವರಾಜು ಮೃತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ.ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪಶು ವೈದ್ಯ ಶಿವರಾಜು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net