ಒಂದೂವರೆ ಗಂಟೆ ಅವಧಿಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ 5 ಜನ ಕೋವಿಡ್ ಪೀಡಿತರು ಪ್ರಾಣ ಬಿಟ್ಟರು!

Corona Death
ಸಾಂದರ್ಭಿಕ ಚಿತ್ರ
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಒಂದೇ ದಿನ ಐವರು ಕೋವಿಡ್ ಸೋಂಕಿತರು ನಿಧನರಾಗಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಸೋಂಕಿತರು ಮಧ್ಯಾಹ್ನ 3.45 ರಿಂದ 5 ಗಂಟೆಯೊಳಗೆ ನಿಧನ ಹೊಂದಿದ್ದಾರೆ.

ಸಾವಿಗೆ ಆಕ್ಸಿಜನ್ ಸಮಸ್ಯೆ ಕಾರಣ ಎಂಬುದು ಮೃತರ ಕುಟುಂಬದವರ ಆರೋಪ. ಆದರೆ, ಇದನ್ನು ನಿರಾಕರಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಮೃತರಲ್ಲಿ ಕೆಲವರು ತೀವ್ರತರವಾದ ರೋಗಗಳಿಂದ ನರಳುತ್ತಿದ್ದರು. ಕೆಲವರಿಗೆ ವಯಸ್ಸಾಗಿತ್ತು. ಹೀಗಾಗಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದರು.

ಆದರೂ ಮತ್ತೊಮ್ಮೆ ಸಾವಿನ ಸ್ಪಷ್ಟ ಕಾರಣದ ತನಿಖೆಗಾಗಿ ತಜ್ಞರ ಸಮಿತಿಯೊಂದನ್ನು ಎರಡು ದಿನಗಳವೊಳಗಾಗಿ ರಚಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net