

ಕಾರವಾರ: ದೇವರ ಹೆಸರು ಹೇಳಿಕೊಂಡು ಜನರಿಂದ ಭಿಕ್ಷೆ ಬೇಡುತ್ತಿದ್ದವರ ಮೇಲೆ ಜಿಲ್ಲೆಯ ವಿವಿಧೆಡೆ ಪೊಲೀಸರು ಕ್ರಮ ವಹಿಸುತ್ತಿದ್ದಾರೆ. ಕಳೆದ ಎರಡು ದಿನದಲ್ಲಿ ಜಿಲ್ಲೆಯ ವಿವಿಧೆಡೆ ಐದು ಭಿಕ್ಷುಕರನ್ನು ಪೊಲೀಸರು ಸಂರಕ್ಷಣೆ ಮಾಡಿದ್ದು, ಅವರ ವಿರುದ್ಧ ಭಿಕ್ಷಾಟನೆ ನಿಷೇಧ ಕಾಯ್ದೆಯ ಅನ್ವಯ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾರಮ್ಮನನ್ನು ಹೊತ್ತು ತರುತ್ತಿದ್ದ ಶಿರಸಿ ದೇವಿಕೆರೆಯ ಮಂಜಕ್ಕ ತಿಮ್ಮ ಕ್ಕ ಉಗರ, ಸೊರಬದ ಮಾರಕಟ್ಟ ಕಟ್ಟಿಮನಿ ಹಾಗೂ ದರ‍್ಗವ್ವಾ ಕಟ್ಟಿಮನಿ ಅವರನ್ನು ಕಾರವಾರ ಬಿಣಗಾ ಬಳಿ ಸಂರಕ್ಷಿಸಿದ ಶಹರ ಠಾಣೆ ಪೊಲೀಸರು ಅವರನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ತಾಯಿ, ತಂಗಿಯ ಮೇಲೆ ಕತ್ತಿ, ಬಡಿಗೆಯಿಂದ ಹಲ್ಲೆ
ಧಾರವಾಡ ಕೃಷಿ ವಿವಿ ಸಮೀಪದ ನಿವಾಸಿ ಸಣ್ಣ ನರಸಪ್ಪ ಎಂಬಾತನನ್ನು ಜೊಯಿಡಾ ತಾಲೂಕಿನ ರಾಮನಗರದಲ್ಲಿ ವಶಕ್ಕೆ ಪಡೆಯಲಾಗಿತ್ತು. ಗುರುವಾರ ಹಳೇ ಹುಬ್ಬಳ್ಳಿಯ ನೇಕಾರ ನಗರದ ಜ್ಯೋತಿ ಸಾಲಿ ಮಾರೆಪ್ಪ ಶಿಂಗೇರಿ ಎಂಬಾಕೆಯನ್ನು ಗೋಕರ್ಣದಲ್ಲಿ ಸಂರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಹಾಜರುಪಡಿಸಲಾಗಿದೆ.
ರಾಜ್ಯದಲ್ಲಿ 1975 ರಿಂದಲೇ ಭಿಕ್ಷಾಟನೆ ನಿಷೇಧವಿದ್ದು, 2020 ಹೈಕರ‍್ಟ್ ಆದೇಶದಂತೆ ಹಿರಿಯ ಅಽಕಾರಿಗಳ ಸೂಚನೆಯ ಮೇರೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.