5 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

10_08_2025_BGR_RURAL_PAGE_3
Published on

ಆನೇಕಲ್​ : ಒತ್ತುವರಿ ಆಗಿದ್ದ 5 ಎಕರೆ ಕಿರು ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ತಾಲೂಕಿನ ಭೂತನಹಳ್ಳಿ ಸರ್ವೇ ನಂ.67ರ ಕಿರು 5 ಎಕರೆ ಜಮೀನನ್ನು ಬೆಂಗಳೂರು ನಗರ ವಿಭಾಗದ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಶನಿವಾರ 25 ಕೋಟಿ ರೂ. ಮೌಲ್ಯದ ಜಮೀನನ್ನು ತೆರವುಗೊಳಿಸಿದ್ದಾರೆ.

ಜೆಸಿಬಿಗಳ ಸಮೇತ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ಪೊಲೀಸ್​ ಭದ್ರತೆ ಮೂಲಕ ಕೆಲವು ಮಾಡಿ ಬಳಿಕ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಸುಪರ್ದಿಗೆ ಪಡೆದಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್​.ರವೀಂದ್ರ ಕುಮಾರ್​ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್​, ವಲಯ ಅರಣ್ಯ ಅಧಿಕಾರಿ ಶ್ರೀಧರ್​ ಹಾಗೂ ಕಗಲಿಪುರ ವಲಯದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.

ಅರಣ್ಯ ಭೂಮಿಯನ್ನು ಯಾರು ಕೂಡ ಒತ್ತುವರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್​ ಆದೇಶದಂತೆ ಅರಣ್ಯ ಭೂಮಿ ಅದು ಅರಣ್ಯಕ್ಕೆ ಸೇರಬೇಕು. ಕೆಲವು ವ್ಯಕ್ತಿಗಳು ಅರಣ್ಯ ಭೂಮಿಯನ್ನು ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದು, ಇಂತಹ ಭೂಮಿಯನ್ನು ಕೊಂಡುಕೊಳ್ಳುವವರು ಎಚ್ಚೆತ್ತುಕೊಳ್ಳಬೇಕಿದೆ. > ಗಣೇಶ ಸಹಾಯಕ ಅರಣ್ಯ ಅಧಿಕಾರಿ ಬೆಂಗಳೂರು ದಕ್ಷಿಣ ಉಪ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net