

ಹುಬ್ಬಳ್ಳಿ: ಪಾರ್ಟ್ಟೈಮ್ ಜಾಬ್ ಕೊಡುವುದಾಗಿ ನಂಬಿಸಿದ ಅಪರಿಚಿತನೊಬ್ಬ, ನಗರದ ಕೆಎಚ್ಬಿ ಕಾಲನಿಯ ಮಹಿಳೆಯೊಬ್ಬರಿಂದ 5.88 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಇನ್ಸ್ಟಾಗ್ರಾಂ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ, ವಿಡಿಯೋ ಲಿಂಕ್ ಕಳುಹಿಸಿದ್ದಾನೆ. ಅಲ್ಲಿದ್ದ ಲಿಂಕ್ ತೆರೆದಾಗ ವಾಟ್ಸ್ ಆಪ್ಗೆ ಪಾರ್ಟ್ಟೈಮ್ ಕೆಲಸ ನೀಡುವುದಾಗಿ ಹೇಳಿ ನೋಂದಣಿ ಮಾಡಿಸಿಕೊಂಡಿದ್ದಾನೆ. ಬಳಿಕ ಟೆಲಿಗ್ರಾಂ ಮೂಲಕ ಸಂರ್ಪಸಿ ಕೆಲ ಟಾಸ್ಕ್ ನೀಡಿ, ಲಾಭ ನೀಡುವುದಾಗಿ ಮಹಿಳೆಯ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.