5.80 ಲಕ್ಷ ರೂ. ಮೌಲ್ಯದ 12 ಬೈಕ್ ಜಪ್ತಿ

h21-sub urbun
Published on

ಹುಬ್ಬಳ್ಳಿ: ದ್ವಿಚಕ್ರ ವಾಹನ ಕಳವು ಪ್ರಕರಣ ಭೇದಿಸುವಲ್ಲಿ ಇಲ್ಲಿಯ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಬೈಕ್ ಕಳವು ಮಾಡಿದ್ದ ಆನಂದ ನಗರ ಮಹಾಂತೇಶ ಕಲಾಲ ಎಂಬಾತನನ್ನು ಬಂಧಿಸಿದ್ದು, ಆತನಿಂದ 5.80 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 12 ಬೈಕ್ ಮತ್ತು 1.10 ಲಕ್ಷ ರೂ. ನಗದು ಸೇರಿ ಒಟ್ಟು 6.90 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಕಲಾಲನನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net