ಬಸ್ ನಿಲ್ದಾಣದಲ್ಲಿ 5.72 ಲಕ್ಷ ರೂ. ಚಿನ್ನಾಭರಣ ಕಳವು

ksrtc bus stand
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
Published on

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು ಮಹಿಳೆಯ ಬ್ಯಾಗ್‌ನಲ್ಲಿದ್ದ 5.72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಎನ್.ಆರ್.ಪುರ ತಾಲೂಕಿನ ಮುಡುಬ ಕೊಣಕೆರೆಯ ಶಶಿಕಲಾ ಎಂಬುವರು ಸರ ಕಳೆದುಕೊಂಡವರು. ನ.23ರಂದು ಶಿವಮೊಗ್ಗದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿತ್ರದುರ್ಗಕ್ಕೆ ಪ್ರಯಾಣಿಸಿದ್ದರು. ಮಗಳ ಮನೆಯಲ್ಲಿದ್ದು ನ.26ರಂದು ಮದುವೆ ಸಮಾರಂಭಕ್ಕೆ ತಯಾರಾಗಲು ವ್ಯಾನಿಟಿ ಬ್ಯಾಗ್ ತೆಗೆದಾಗ ಪರ್ಸ್ ನಾಪತ್ತೆಯಾಗಿತ್ತು. ಶಶಿಕಲಾ ಕೆಂಪು ಬಣ್ಣದ ಪರ್ಸ್‌ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇರಿಸಿದ್ದರು. ಬಂಗಾರದ ಎರಡು ಸರಗಳು, ಎರಡು ಬಳೆ ಇದ್ದವು.
ಶಿವಮೊಗ್ಗದಲ್ಲಿ ಬಸ್ ಹತ್ತುವ ವೇಳೆ ರಶ್ ಇತ್ತು. ಆಗ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು ಪರ್ಸ್ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net