ತುಳಸಿಗೇರೆಪ್ಪನ ಹುಂಡಿಯಲ್ಲಿ 5.56 ಲಕ್ಷ ರೂ. ಸಂಗ್ರಹ

counting
ತುಳಸಿಗೇರಿಯ ಹನುಮಂತದೇವರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿ.
Published on

ಕಲಾದಗಿ: ಸಮೀಪದ ಖ್ಯಾತ ಧಾರ್ಮಿಕ ಕ್ಷೇತ್ರ ತುಳಸಿಗೇರಿಯ ಹನುಮಂತದೇವರ ದೇವಸ್ಥಾನದಲ್ಲಿ ಬುಧವಾರ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ಒಟ್ಟು 5,56,428 ರೂ. ಸಂಗ್ರಹವಾಗಿದೆ.
ತಾಲೂಕು ತಹಸೀಲ್ದಾರ್ ಹಾಗೂ ದೇವಾಲಯದ ಆಡಳಿತಾಧಿಕಾರಿಗಳೂ ಆದ ಅಮರೇಶ ಪಮ್ಮಾರ ಉಪಸ್ಥಿತಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ನಡೆದ ಎಣಿಕೆಯಲ್ಲಿ ದೇವಾಲಯದ ನಾಲ್ಕು ಹುಂಡಿಗಳನ್ನು ತೆರೆದು ಹಣ ಎಣಿಕೆ ಮಾಡಲಾಯಿತು.
ತಾಲೂಕು ಕಚೇರಿಯ ಶಿರಸ್ತೆದಾರ ಡಿ.ಐ. ನಿಲುಗಲ್, ಉಪತಹಸೀಲ್ದಾರ್ ಸಂಗೀತಾ ಇಟಗಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಮ ಲೆಕ್ಕಾಧಿಕಾರಿ ರವಿಕುಮಾರ ಕುಳ್ಳೊಳ್ಳಿ ಮತ್ತಿತರರು ಎಣಿಕೆ ಕಾರ್ಯದಲ್ಲಿದ್ದರು.
ಕಳೆದ ಜೂನ್‌ನಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ 5,44,175 ರೂಗಳು ಸಂಗ್ರಹವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net