

ಮೈಸೂರು: ಮೈಸೂರು ವಿಮಾನ ನಿಲ್ದಾಣದಲ್ಲಿ 5.50 ಲಕ್ಷ ರೂ. ಅಕ್ರಮ ಹಣವನ್ನು ಜಪ್ತಿ ಮಾಡಲಾಗಿದೆ.
ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳುತ್ತಿದ್ದ ಮೊಹಮ್ಮದ್ ಜಾಸೀನ್ ಈ ಹಣವನ್ನು ಸಾಗಿಸುತ್ತಿದ್ದರು.
ವಿಮಾನ ನಿಲ್ದಾಣ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಇವರು ಸೂಕ್ತ ದಾಖಲೆಯನ್ನು ನೀಡಿಲ್ಲ. ಹೀಗಾಗಿ, ಎಸ್‌ಎಸ್‌ಟಿ ಅಧಿಕಾರಿ ಶಿವಕುಮಾರ್ ಹಾಗೂ ತಂಡದವರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಗೆ ರವಾನಿಸಿದ್ದಾರೆ.