5.5 ಲಕ್ಷ ರೂ. ಮೌಲ್ಯದ ಗಾಂಜಾ ಗಿಡ ವಶ

22sor1
Published on

ಸೊರಬ: ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಕಣ್ಣೂರು ಗ್ರಾಮದ ಬಗರ್ ಹುಕುಂ ಜಮೀನಿನಲ್ಲಿ ಬೆಳೆದಿದ್ದ ಸುಮಾರು 5.5 ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಕಣ್ಣೂರು ಗ್ರಾಮದ ಗಂಗಾಧರಪ್ಪ, ಪರಶುರಾಮಪ್ಪ, ಹುಚ್ಚರಾಯಪ್ಪ ಎಂಬುವರು ಶುಂಠಿ ಮತ್ತು ಮೆಕ್ಕೆಜೋಳದೊಂದಿಗೆ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಲಾಗಿತ್ತು. ಅಬಕಾರಿ ನಿರೀಕ್ಷಕ ಹನುಮಂತಪ್ಪ, ಉಪ ನಿರೀಕ್ಷಕ ಜಾನ್, ಅಣ್ಣಪ್ಪ, ಚಂದ್ರಪ್ಪ, ರಾಜಮ್ಮ, ಆರ್.ಐ.ನಾಗರಾಜ್, ಮುದಾಸಿರ್, ಗುರುಮೂರ್ತಿ, ಗಂಗಾಧರ್, ಬಾಲಚಂದ್ರ ತಂಡ ದಾಳಿ ಕೈಗೊಂಡಿತ್ತು. ಅಬಕಾರಿ ಜಿಲ್ಲಾ ಉಪ ಆಯುಕ್ತ ಅಜಿತ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ, ಸಾಗರ, ಸೊರಬ ಅಬಕಾರಿ ಸಿಬ್ಬಂದಿ ಮೂರು ತಂಡಗಳಾಗಿ ಜಂಟಿ ಕಾರ್ಯಾಚರಣೆ ನಡೆಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net