

ಹುಬ್ಬಳ್ಳಿ: ಆನ್‌ಲೈನ್ ಫ್ಲೈಟ್ ಟಿಕೆಟ್ ಬುಕ್ ಮಾಡಿ ಹೆಚ್ಚುವರಿ ಹಣ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ಕುಶಾಲ್ ಎಂಬುವರಿಂದ 5.43 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ವಿವಿಧ ಪ್ರೀಪೆಟ್ ಟಾಸ್ಕ್ ಹೆಸರಿನಲ್ಲಿ 10 ಸಾವಿರ ರೂ. ಹಾಕಿಸಿಕೊಂಡು ನಂತರ 20 ಸಾವಿರ ರೂ. ಕೊಟ್ಟು ಲಾಭದಾಸೆ ತೋರಿಸಿದ್ದಾರೆ. ನಂತರ ವಿವಿಧ ಖಾತೆಗಳಿಂದ 6,22,531 ರೂ. ಹಾಕಿಸಿಕೊಂಡು 5,43,699 ರೂ. ವಾಪಸ್ ಕೊಡದೆ ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.