ಕನಕಾಚಲಪತಿ ಹುಂಡಿಯಲ್ಲಿ 5.38 ಲಕ್ಷ ರೂ.ಸಂಗ್ರಹ

6 KNAK 01
ಕನಕಗಿರಿ ಶ್ರೀ ಕನಕಾಚಲಪತಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
Published on

ಕನಕಗಿರಿ: ಇಲ್ಲಿನ ಶ್ರೀ ಕನಕಾಚಲಪತಿ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳನ್ನು ಶನಿವಾರ ಎಣಿಕೆ ಮಾಡಲಾಗಿದ್ದು, 5,38,230 ರೂ. ಸಂಗ್ರಹವಾಗಿದೆ. ಎರಡು ತಿಂಗಳ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ದೇವಸ್ಥಾನದ ಖಾತೆಯಲ್ಲಿ ಸಂಗ್ರಹವಾದ ಒಟ್ಟು ಮೊತ್ತವನ್ನು ನೋಡಿಕೊಂಡು ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗುವುದು. ಭಕ್ತರ ಹಾಗೂ ಪ್ರವಾಸಿಗರ ತಾಣ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಮುರುಡಿ ತಿಳಿಸಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕೀರ್ತಿ ಸೋನಿ, ವೆಂಕಟೇಶ ಸೌದ್ರಿ, ನಾಗಪ್ಪ ಕೊರೆಡ್ಡಿ, ವಿ.ಸಿಂಗ್ರಾಚಾರ್ ಅರ್ಚಕರು, ಪ್ರಮುಖರಾದ ಸುದರ್ಶನರೆಡ್ಡಿ, ಸೋಮನಾಥ ತಿಮ್ಮಾಪೂರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net