ಜಿಲ್ಲಾ ಕಾರ್ಮಿಕ ಅಧಿಕಾರಿ ಬಳಿ 5.38 ಕೋಟಿ ರೂ. ಸಂಪತ್ತು; 7 ಕಡೆ ಲೋಕಾಯುಕ್ತ ದಾಳಿ

lokayukta
Published on

ಮೈಸೂರು: ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್ ಅವರ ಶಾರದಾದೇವಿನಗರದಲ್ಲಿರುವ ಮನೆಗೆ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 5.38 ಕೋಟಿ ರೂ. ಮೊತ್ತದ ಸಂಪತ್ತು ಪತ್ತೆಯಾಗಿದೆ.


ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು ಕೆಲ ದಾಖಲೆಗಳನ್ನು ಕಲೆಹಾಕಿದ್ದಾರೆ. ಚೇತನ್ ಅವರಿಗೆ ಸೇರಿದ 7 ಸ್ಥಳಗಳಲ್ಲಿ ಶೋಧ ನಡೆದಿದೆ. ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.


ದಾಳಿ ಸಂದರ್ಭದಲ್ಲಿ ಚಿನ್ನಾಭರಣ, ನಗದು, ಆಸ್ತಿಪತ್ರಗಳು ಸೇರಿದಂತೆ ಇನ್ನಿತರ ದಾಖಲೆಗಳು ಪತ್ತೆಯಾಗಿವೆ. 2 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, 7.69 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು,

ಈ ಎಲ್ಲ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 4.36 ಕೋಟಿ ರೂ. ಆಗಿದೆ. ಜತೆಗೆ, 58 ಲಕ್ಷ ರೂ. ನಗದು, 14.71 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳು, 30 ಲಕ್ಷ ರೂ. ಬೆಲೆ ಬಾಳುವ ವಾಹನಗಳು ಸೇರಿದಂತೆ ಒಟ್ಟಾರೆ ಚರಾಸ್ತಿಯ ಮೌಲ್ಯ 1,02,71,500 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net