

ಹುಬ್ಬಳ್ಳಿ: ಬಿಯಾಂಡ್ ವೆಬ್ ಡಿಜಿಟಲ್ ಮಾರ್ಕೆಟಿಂಗ್ ವೆಬ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಬಹುದೆದು ನಂಬಿಸಿದ ಅಪರಿಚಿತರು ಧಾರವಾಡದ ಮಹಿಳೆಯೊಬ್ಬರಿಂದ 5.35 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಟೆಲಿಗ್ರಾಂ ಮೂಲಕ ಸಂಪರ್ಕಿಸಿದ ವಂಚಕರು, ಮಹಿಳೆಗೆ ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ಮೊದಲು ಹಣ ಕೊಟ್ಟಂತೆ ಮಾಡಿದ್ದಾರೆ. ನಂತರ ಆನ್‌ಲೈನ್ ಮೂಲಕ ಮಹಿಳೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.