5.28 ಲಕ್ಷ ಮೌಲ್ಯದ ಆಭರಣ ವಶಕ್ಕೆ

2402 klb 07
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ವಿವಿಧ ಮನೆಗಳಲ್ಲಿ ಕಳ್ಳತನದ ಆರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದು, ಬಂಧಿತರಿAದ 5.28 ಲಕ್ಷ ರೂ.ಮೌಲ್ಯದ ಆಭರಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನಕುಮಾರ ಆರ್. ತಿಳಿಸಿದರು.

ಫೆ.೨೨ರಂದು ಕಾರ್ಯಾಚರಣೆ ನಡೆಸಿದ ಗುಲ್ಬರ್ಗ ವಿವಿ ಪೊಲೀಸರ ತಂಡ, ನಗರದ ಹೊರವಲಯದ ಕೋಟನೂರ (ಡಿ) ಬಳಿ ಸಂಶಯಾತ್ಮಕವಾಗಿ ಓಡಾಡುತ್ತಿದ್ದ ನಾಲ್ವರನ್ನು ಬೆನ್ನಟ್ಟಿದ್ದು, ಇಬ್ಬರು ಸಿಕ್ಕಿದ್ದು, ಇನ್ನಿಬ್ಬರು ತಪ್ಪಿಸಿಕೊಂಡು ಹೋಗಿದ್ದಾರೆ. ಆಳಂದ ತಾಲೂಕಿನ ಕಮಸರ ತಾಂಡಾದ ಅಗಲು ಚವ್ಹಾಣ್, ಸೀತಾರಾಮ ಚವ್ಹಾಣ್ ಬಂಧಿತರು. ತಪ್ಪಿಸಿಕೊಂಡವರನ್ನು ಶೀಘ್ರ ಬಂಧಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರು ಪರಸ್ಪರ ಸಂಬಂಧಿಕರೇ ಆಗಿದ್ದು, ತಪ್ಪಿಸಿಕೊಂಡವರಲ್ಲಿ ಓರ್ವ ತೆಲಂಗಾಣದವನಿದ್ದಾನೆ. ನಗರದ ಸಾಯಿರಾಮ ನಗರ, ನೃಪತುಂಗ ಕಾಲನಿ, ಹುಂಡೇಕಾರ ಕಾಲನಿ, ಭೂಪಾಲತೆಗನೂರ ಗ್ರಾಮದಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರು ಪ್ರಕರಣದಲ್ಲಿ ೭೨ ಗ್ರಾಂ ಬಂಗಾರ (೪.೩೦ ಲಕ್ಷ ರೂ.), ೨೬೫ ಗ್ರಾಂ ಬೆಳ್ಳಿ (೧೮ ಸಾವಿರ ರೂ.), ಎರಡು ಮೋಟಾರ್ ಸೈಕಲ್ (೮೦ ಸಾವಿರ ರೂ.) ಸೇರಿ ಒಟ್ಟು ೫.೨೮ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಎರಡು ಗ್ಯಾಂಗ್‌ಗಳನ್ನು ಗುರುತಿಸಿದ್ದು, ಇನ್ನೊಂದು ಗ್ಯಾಂಗ್ ಸೃಷ್ಟಿಯಾಗಿದೆ. ಅವರು ಸ್ಥಳೀಯವಾಗಿ ಇರುವುದಿಲ್ಲ. ಇನ್ನೊಂದು ಗ್ಯಾಂಗ್‌ನ್ನು ಬಂಧಿಸಲಾಗುವುದು ಎಂದು ಹೇಳಿದರು.

ಗುಲ್ಬರ್ಗ ವಿವಿ ಠಾಣೆ ಪಿಐ ಜಗದೀಶ ಕೆ.ಜಿ., ಪಿಎಸ್‌ಐ ಮಹ್ಮದ್ ಇಬ್ರಾಹಿಂ, ಎಸ್‌ಐ ಹುಸೇನ್ ಬಾಷಾ, ಸಿಬ್ಬಂದಿ ರಾಜು ಟಕಾಳೆ, ಸಂಜಯಕುಮಾರ, ಹಾಜಿಮಲಂಗ, ಪ್ರಕಾಶ, ವಿಶ್ವನಾಥ, ಮಂಜುನಾಥ, ಪ್ರೀತಂ, ಸುಲ್ತಾನ, ಭೀರಣ್ಣ, ರಾಜಕುಮಾರ ಫರಹತಾಬಾದ್ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಚೇತನಕುಮಾರ ಶ್ಲಾಘಿಸಿದರು.
ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಉಪ ಪೊಲೀಸ್ ಆಯುಕ್ತ ಪ್ರವೀಣ ನಾಯಕ, ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net