ಪೊಲೀಸ್ ಠಾಣೆಗಳಲ್ಲಿ 4ನೇ ಶನಿವಾರ ಜನಸಂಪರ್ಕ ಸಭೆ

cp
Published on

ಬೆಂಗಳೂರು : ನಾಗರಿಕರ ಸಮಸ್ಯೆಗಳನ್ನು ಅಲಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂದಾಗಿದ್ದು, ಪ್ರತಿ ತಿಂಗಳ 4ನೇ ಶನಿವಾರ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲು ಆಯುಕ್ತರು ನಿರ್ಧರಿಸಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸದಾಗಿ ಮಾಸಿಕ ಜನ ಸಂಪರ್ಕ ದಿನ ಆರಂಭಿಸಲಾಗಿದೆ. ಪ್ರತಿ ತಿಂಗಳ 4ನೇ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಥವಾ ಯಾವುದೇ ಮಾಹಿತಿ ಪಡೆಯಲು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಜನ ಸಂಪರ್ಕ ಸಭೆಯಲ್ಲಿ ಬಾಕಿಯಿರುವ ಪ್ರಕರಣಗಳ ಪ್ರಗತಿ, ಅಪರಾಧ ಕೃತ್ಯಗಳ ವಿವರ, ಇತರೆ ಮಾಹಿತಿಗಳು ಮತ್ತು ದೂರುಗಳನ್ನು ನಾಗರಿಕರು ಸಲ್ಲಿಸಬಹುದಾಗಿದೆ. ಸಭೆಯಲ್ಲಿ ನಾನು(ಕಮಲ್ ಪಂತ್) ಸೇರಿದಂತೆ ಆಯಾ ಠಾಣಾ ಇನ್‌ಸ್ಪೆಕ್ಟರ್‌ವರೆಗೆ ಎಲ್ಲ ಅಧಿಕಾರಿಗಳು ಠಾಣೆಯಲ್ಲಿ ಖುದ್ದು ಹಾಜರಿದ್ದು ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net