

ಮಡಿಕೇರಿ:
ಕೊಡಗಿನ ಕುಗ್ರಾಮಗಳಿಂದಲೂ ಇನ್ನು ಮುಂದೆ ಬಿಎಸ್‌ಎನ್‌ಎಲ್ ಸಿಮ್ ಬಳಸಿ ನಿರರರ್ಗಳವಾಗಿ ಮಾತನಾಡಬಹುದು. ದೂರದ ಊರುಗಳಿಗೆ ದುಡಿಯಲು ಹೋಗಿರುವ ಮಕ್ಕಳು, ಮೊಮ್ಮಕ್ಕಳಿಗೆ ವೀಡಿಯೋ ಕಾಲ್ ಕೂಡ ಮಾಡಬಹುದು. ಮೊಬೈಲ್ ತಂತ್ರಜ್ಞಾನ ಆಧಾರಿತ ಸೇವೆಗಳೂ ಸುಲಭವಾಗಲಿವೆ. ಹೌದು ಇದೆಲ್ಲಾ ಭಾರÀತ ಸರ್ಕಾರದ 4ಜಿ ಸ್ಯಾಚುರೇಷನ್ ಪ್ರೋಜೆಕ್ಟ್ ಕಾರ್ಯಕ್ರಮದಿಂದ ಸಾಧ್ಯವಾಗುವ ದಿನಗಳು ಹತ್ತಿರ ಬರುತ್ತಿದೆ. ಎಲ್ಲವೂ ಅಂದುಕೊAಡAತೆ ಆದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯ 68 ಹಳ್ಳಿಗಳು ಬಿಎಸ್‌ಎನ್‌ಎನ್‌ನ 4 ಜಿ ತಂತ್ರಜ್ಞಾನದ ಅಡಿಯಲ್ಲಿ ಬರಲಿವೆ.
ಖಾಸಗಿ ದೂರಸಂಪರ್ಕ ಕಂಪೆನಿಗಳ ಪೈಪೋಟಿ ಎದುರು ಸಂಪೂರ್ಣ ಸೊರಗಿರುವ ಸರ್ಕಾರಿ ಒಡೆತನದ ಬಿಎಸ್‌ಎನ್‌ಎಲ್ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕುಗ್ರಾಮಗಳಲ್ಲೂ 4 ಜಿ ಸಂಪರ್ಕ ನೀಡಲು ಮುಂದಡಿ ಇಟ್ಟಿದೆ. ಭಾರÀತ ಸರ್ಕಾರದ 4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ಗೆ ಕೇಂದ್ರ ಸಂಪುಟ 2022ರ ಜುಲೈ 27ರಂದು ಅನುಮೋದನೆ ಕೊಟ್ಟಿತ್ತು. ಮೊಬೈಲ್ ಸಂಪರ್ಕ ಇಲ್ಲದ ಜಾಗಗಳಲ್ಲಿ 4ಜಿ ಸೇವೆ ಕಲ್ಪಿಸಲು ಬಿಎಸ್‌ಎನ್‌ಎಲ್‌ಗೆ 500 ದಿನಗಳ ಗಡುವು ನೀಡಲಾಗಿತ್ತು. ಇದರ ಪ್ರಕಾರ ಈ ವರ್ಷಾಂತ್ಯಕ್ಕೆ ಗಡುವು ಮುಗಿಯಲಿದ್ದು, ಅಷ್ಟರೊಳಗೆ ನಿಗದಿತ ಗುರಿಯನ್ನು ಬಿಎಸ್‌ಎನ್‌ಎನ್ ಸಾಧಿಸಲೇಬೇಕಿದೆ.
4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಕಾರ್ಯಕ್ರಮದ ಪ್ರಕಾರ ಈತನಕ ಮೊಬೈಲ್ ಸಂಪರ್ಕ ಇಲ್ಲದ ದೇಶದ 24,680 ಕುಗ್ರಾಮಗಳಿಗೆ 16,464 ಟವರ್‌ಗಳ ಮೂಲಕ 4ಜಿ ಸಂಪರ್ಕ ಒದಗಿಸುವ ಹೊಣೆಗಾರಿಕೆ ಬಿಎಸ್‌ಎನ್‌ಎಲ್ ಮೇಲಿದೆ. ಇದರ ಜತೆಗೆ 2ಜಿ ಮತ್ತು 3 ಜಿ ಸಂಪರ್ಕ ಮಾತ್ರ ಹೊಂದಿರುವ 6,279 ಗ್ರಾಮಗಳನ್ನು 4ಜಿ ತಂತ್ರಜ್ಞಾನಕ್ಕೆ ಮೇಲ್ದರ್ಜೆಗೆ ಏರಿಸುವ ಗುರಿಯನ್ನೂ ನೀಡಲಾಗಿದೆ. ಇದಕ್ಕಾಗಿ ಹೆಚ್ಚುವರಿ 3,258 ಟವರ್‌ಗಳನ್ನು ಬಳಸಲಾಗುತ್ತಿದೆ. ಇದು 26,316 ಕೋಟಿ ರೂ. ಮೊತ್ತದ ದೊಡ್ಡ ಯೋಜನೆಯೂ ಇದಾಗಿದೆ.
ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ನಿಧಿ ಮುಖಾಂತರ 4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಕುಗ್ರಾಮಗಳಲ್ಲೂ ಅತ್ಯುತ್ತಮ ಗುಣಮಟ್ಟದ ಮೊಬೈಲ್ ಸಂಪರ್ಕ ಕಲ್ಪಿಸುವುದರ ಜತೆಗೆ ಮೊಬೈಲ್ ಬ್ರಾಡ್‌ಬ್ಯಾಂಡ್ ಮೂಲಕ ವಿವಿಧ ಇ-ಆಡಳಿತ ಸೇವೆಗಳು, ಬ್ಯಾಂಕಿAಗ್ ಸೇವೆಗಳು, ಟೆಲಿ-ಮೆಡಿಸಿನ್, ಟೆಲಿ-ಶಿಕ್ಷಣ ಮತ್ತಿತರ ಪ್ರಯೋಜನಗಳನ್ನೂ ಹಳ್ಳಿ ಹಳ್ಳಿಗಳಿಗೂ ತಲುಪಿಸುವ ಉದ್ದೇಶ ಈ ಯೋಜನೆಯ ಹಿಂದಿದೆ.
4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರವೂ ಸೂಕ್ತ ಸ್ಪಂದನೆ ಕೊಟ್ಟಿದ್ದು, ಟವರ್ ಸ್ಥಾಪನೆಗೆ ಅಗತ್ಯವಿರುವ ನಿವೇಶನ ಒದಗಿಸುತ್ತಿರುವುದರಿಂದ ಯೋಜನೆಯ ಅನುಷ್ಠಾನಕ್ಕೆ ಬಿಎಸ್‌ಎನ್‌ಎಲ್‌ಗೆ ಹೆಚ್ಚು ಅನುಕೂಲ ಒದಗಿದಂತಾಗಿದೆ. ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಫಲವಾಗಿ ಕೊಡಗಿನಲ್ಲೂ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಮೊಬೈಲ್ ಸಂಪರ್ಕ ಇಲ್ಲದ ಕೊಡಗಿನ ಗುಡ್ಡಗಾಡು ಪ್ರದೇಶಗಳಲ್ಲಿ ಮೊಬೈಲ್ ಸೇವೆಗಾಗಿ 4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಅನುಷ್ಠಾನಗೊಳಿಸುವಂತೆ ಪ್ರತಾಪ್ ಸಿಂಹ, ಕೇಂದ್ರ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಪ್ರಮುಖವಾಗಿ ಕಡಿಮೆ ಹೂಡಿಕೆ ಹೆಚ್ಚು ಲಾಭದ ಉದ್ದೇಶವನ್ನೇ ಹೊಂದಿರುವ ಖಾಸಗಿ ಟೆಲಿಕಾಂ ಕಂಪೆನಿಗಳು ಕೊಡಗಿನಲ್ಲಿ ನಗರ ಕೇಂದ್ರೀಕೃತವಾಗಿ ಸಂಪರ್ಕ ವ್ಯವಸ್ಥೆ ರೂಪಿಸಿವೆ. ಹೆಚ್ಚು ಮೂಲ ಸೌಕರ್ಯ ಬಯಸುವ ಮತ್ತು ವೆಚ್ಚದಾಯಕ ಅನ್ನಿಸಿಕೊಂಡಿರುವ ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಕುಗ್ರಾಮಗಳಲ್ಲಿ ಖಾಸಗಿ ಸಂಸ್ಥೆಗಳ ಮೊಬೈಲ್ ಸಂಪರ್ಕ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರದ 4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಕಾರ್ಯಕ್ರಮ ಕೊಡಗಿನ ಮಟ್ಟಿಗೆ ಮಹತ್ವದ್ದಾಗಿದ್ದು, ಬಿಎಸ್‌ಎನ್‌ಎಲ್ ಮೂಲಕ ಟವರ್‌ಗಳ ಸಂಖ್ಯೆ ಹೆಚ್ಚಿಸಿ 4 ಜಿ ಸಂಪರ್ಕ ಒದಗಿಸುವುದಲ್ಲದೆ 2ಜಿ, 3ಜಿ ಯಿಂದ ಮೇಲ್ದರ್ಜೆಗೂ ಏರಲಿದೆ.
4ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಕಾರ್ಯಕ್ರಮದಡಿಯಲ್ಲಿ ಕೊಡಗಿನಲ್ಲಿ 68 ಟವರ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಸಿಂಹಪಾಲು ಸೋಮವಾರಪೇಟೆ ತಾಲೂಕಿಗೆ ಮೀಸಲಾಗಿದೆ. ಇಲ್ಲಿ 34 ಟವರ್‌ಗಳ ನಿರ್ಮಾಣಕ್ಕೆ ಪೂರ್ವಭಾವಿ ಸಿದ್ಧತೆ ನಡೆದಿದ್ದು, ಪ್ರಥಮ ಟವರ್ ನಿರ್ಮಾಣಕ್ಕೆ ಮಂಗಳವಾರ (ಅ.10) ಕೊತ್ನಳ್ಳಿಯಲ್ಲಿ ಭೂಮಿ ಪೂಜೆ ನಡೆದಿದೆ. ಟವರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ 200 ಚಮೀ ಜಾಗ ಕೊಡುತ್ತದೆ. ಕೊತ್ನಳ್ಳಿಯಲ್ಲಿ ಟವರ್ ನಿರ್ಮಾಣದಿಂದ ಕೊತ್ನಳ್ಳಿ, ಬೆಂಕಳ್ಳಿ, ಬೀಕಳ್ಳಿ, ಕುಡಿಗಾಣ, ತಟಿಕೊಪ್ಪ, ನಾಡ್ನಳ್ಳಿ, ಕುಂಬ್ರಿಕೋಡಿ, ಜಕ್ಕನಳ್ಳಿ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಕೊತ್ನಳ್ಳಿಯಲ್ಲಿ ಟವರ್ ನಿರ್ಮಾಣಕ್ಕೆ ಭೂಮಿ ಪೂಜೆ ಸಂದರ್ಭ ತಮ್ಮ ಮನೆಯ ಉತ್ಸವ ಎಂಬAತೆ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತಮ್ಮೂರಿಗೆ
ಬಿಎಸ್‌ಎನ್‌ಎಲ್ 4ಜಿ ಸಂಪರ್ಕ ಬರುತ್ತದೆ ಎನ್ನುವ ಸಂಭ್ರಮ ಇವರಲ್ಲಿ ಎದ್ದು ಕಾಣುತ್ತಿತ್ತು. ಬಿಎಸ್‌ಎನ್‌ಎಲ್ ಕೊಡಗು ವ್ಯವಸ್ಥಾಪಕ ಪ್ರದೀಪ್ ಆರ್., ಸೋಮವಾರಪೇಟೆ ತಾಲೂಕು ಮಂಡಲ ಅಭಿಯಂತರ ವಾಸುದೇವನ್, ಉಪಮಂಡಲ ಅಭಿಯಂತರರಾದ ಲೀಲಾ ದಯಾನಂದ ಕೆ., ಮಡಿಕೇರಿಯ ಉಪಮಂಡಲ ಅಭಿಯಂತರ ಪಂಚಾಕ್ಷರಿ ಡಿ.ಜೆ. ಗ್ರಾಮಸ್ಥರ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 68 ಟವರ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಅಂದಾಜು 34 ಜಾಗಗಳಲ್ಲಿ ಟವರ್ ಗಳು ನಿರ್ಮಾಣಗೊಳ್ಳುವ ಪೂರ್ವಭಾವಿ ಕೆಲಸ ನಡೆದಿದೆ. ಪ್ರಥಮವಾಗಿ ಮಂಗಳವಾರ ಕೊತ್ನಳ್ಳಿ ಗ್ರಾಮದಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸಂಭ್ರಮದಿAದ ಪಾಲ್ಗೊಂಡು ಸಂಭ್ರಮಿಸಿದರು.