49ನೇ ರಾಜ್ಯಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರ ಅನ್ವೇಷಣಾ ಸಮಾವೇಶ

49ನೇ ರಾಜ್ಯಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರ ಅನ್ವೇಷಣಾ ಸಮಾವೇಶ
Published on

ಹಾಸನ: ಹೆಣ್ಣು ಗಂಡು ಇಬ್ಬರು ಹೊಂದಾಣಿಕೆ ಮತ್ತು ಪ್ರೀತಿಯಿಂದ ಜೀವನ ನಡೆಸಿದಾಗ ಮಾತ್ರ ಸುಖ ಸಂಸಾರವಾಗಲಿದೆ. ಅದನ್ನ ಬಿಟ್ಟು ಷರತ್ತುಗಳಿಂದ ಬದುಕಲು ಸಾಧ್ಯವಿಲ್ಲ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಅಭಿಪ್ರಾಯಪಟ್ಟರು.

ನಗರದ ಶೃಂಗೇರಿ ಶ್ರೀ ಶಂಕರಮಠದ ಶ್ರೀ ಭಾರತಿ ತೀರ್ಥ ಕೃಪಾ ಸಭಾಂಗಣದಲ್ಲಿ ನಡೆದ 49ನೇ ರಾಜ್ಯಮಟ್ಟದ ಬೃಹತ್ ತ್ರಿಮತಸ್ಥ ಬ್ರಾಹ್ಮಣ ವಧು-ವರ ಅನ್ವೇಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಪವಿತ್ರ ಕಾರ್ಯಕ್ರಮ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಾಕಷ್ಟು ಹೆಣ್ಣು ಗಂಡುಗಳಿಗೆ ಅನುಕೂಲವಾಗುತ್ತಿದೆ ಇದರ ಪ್ರಯೋಜನವನ್ನು ಈಗಾಗಲೇ ಹಲವು ಜನರು ಪಡೆದಿದ್ದಾರೆ ಎಂದು ಹೇಳಿದರು.

ನಾವು ಹಿಂದೆ ವಧು-ವರ ಅನ್ವೇಷಣಾ ಕಾರ್ಯಕ್ರಮವನ್ನು ಆರಂಭಿಸಿದಾಗ ಹೆಚ್ಚು ಯುವತಿಯರು ಭಾಗವಹಿಸುತ್ತಿದ್ದರು, ಹುಡುಗರ ಸಂಖ್ಯೆ ಕಡಿಮೆ ಇರುತ್ತಿತ್ತು. ಬದಲಾದಂತೆ ಈಗ ಹುಡುಗರ ಸಂಖ್ಯೆ ಹೆಚ್ಚಾಗಿದೆ, ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲ ಸಮಾಜದಲ್ಲಿ ಕೂಡ ಹುಡುಗ ಹುಡುಗಿಯರು ಹಲವು ಷರತ್ತುಗಳನ್ನು ಹಾಕುವುದರಿಂದ ಮದುವೆಯಾಗುತ್ತಿಲ್ಲ ಅವರಿಗೆ ವಯಸ್ಸಾಗುತ್ತಿದೆ. ಆದ್ದರಿಂದ ಉತ್ತಮ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಕಾರ್ಯಕ್ರಮಗಳ ಮೂಲಕ ಮನಸ್ಸಿನ ಹೊಂದಾಣಿಕೆಯಿಂದ ಮದುವೆಯ ಭಾಗ್ಯ ಕೂಡಿ ಬರುತ್ತಿದೆ ಎಂದರು.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ತ್ರಿಮತಸ್ಥ ಬ್ರಾಹ್ಮಣ ವಧು-ವರರ ಅನ್ವೇಷಣಾ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಜನರು ನೋಂದಾವಣೆ ಮಾಡಿಕೊಂಡು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಸಪ್ತಪದಿ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎಸ್. ಭಾರಧ್ವಾಜ್, ಮುರುಳಿಧರ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಡಿ.ಎನ್. ವೆಂಕಟೇಶ್, ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎಸ್ ವೆಂಕಟೇಶ್, ಮದ್ವ ಸಂಘದ ಅಧ್ಯಕ್ಷ ಕೆ.ಪಿ.ಎಸ್. ಪ್ರಮೋದ್, ಶ್ರೀಮತಿ ಸಂಪಿಗೆ ಲಕ್ಷ್ಮಮ್ಮ ಚಾರಿಟಬಲ್‌ನ ಗೋಪಾಲ ಕೃಷ್ಣ ಪ್ರಭು, ಎನ್.ಎಸ್. ಗೋಪಾಲ್, ಟಿ.ಎನ್. ಚಂದ್ರಶೇಖರ್, ಬಿ. ಸುರೇಶ್, ಎನ್. ಸುದೀಂದ್ರ, ಯತೀಶ್, ಎಸ್. ಬಾಲಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net