49 ಟನ್ ಅಕ್ಕಿ ವಶ

crime
Published on

ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಎರಡು ಲಾರಿ ಹಾಗೂ 49 ಟನ್ ಅಕ್ಕಿ ವಶಕ್ಕೆ ಪಡೆದಿದ್ದು, ನಾಲ್ವರನ್ನು ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿಯಿಂದ ಹುಬ್ಬಳ್ಳಿಗೆ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು. ಮಾಹಿತಿ ಅರಿತ ಬೆಂಡಿಗೇರಿ ಠಾಣೆ ಪೊಲೀಸರು, ದಾಳಿ ಮಾಡಿದ್ದಾರೆ. ಅಕ್ಕಿಯ ಎಲ್ಲಿಂದ ಆಗಮಿಸಿದೆ. ಮತ್ತೆ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದೆಲ್ಲದರ ಮಾಹಿತಿಯನ್ನು ಪೊಲೀಸರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net