ತಿತಿಮತಿ ಸಹಕಾರ ಸಂಘಕ್ಕೆ 49 ಲಕ್ಷ ರೂ. ಲಾಭ

Published on

ಗೋಣಿಕೊಪ್ಪ: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ 49 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ರಾಮಕೃಷ್ಣ ತಿಳಿಸಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 2022-23ನೇ ಸಾಲಿನ ಆಡಿಟ್ ವರದಿ ಎ ಕ್ಲಾಸ್‌ನಲ್ಲಿದೆ. ಸಂಘ ವಾರ್ಷಿಕವಾಗಿ 92 ಕೋಟಿ ರೂ. ವ್ಯವಹಾರ ನಡೆಸಿದೆ. ಸಾಲ ವಿತರಣೆ, ರಸಗೊಬ್ಬರ, ಕೃಷಿ ಪರಿಕರ ಮಾರಾಟದಿಂದ 49 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 24 ಲಾಭಾಂಶ ನೀಡಲಾಗುತ್ತದೆ ಎಂದು ವಿವರಿಸಿದರು.
ಸಂಘದಲ್ಲಿ 1,226 ಸದಸ್ಯರಿದ್ದು, 1.35 ಕೋಟಿ ರೂ. ಪಾಲು ಹಣ, 1.92 ಕೋಟಿ ರೂ. ಕ್ಷೇಮ ನಿಧಿ, 12 ಕೋಟಿ ರೂ. ಸದಸ್ಯರ ಠೇವಣಿ ಸಂಗ್ರಹವಾಗಿದೆ ಎಂದರು.

ಸಹಕಾರ ಸಂಘದ ಮಾರಾಟ ಮಳಿಗೆಯಿಂದ ಸದಸ್ಯರಿಗೆ ಆಹಾರ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಲಾಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಉಪಾಧ್ಯಕ್ಷ ಪಾಲೆಕಂಡ ಜೆ. ನಂಜಪ್ಪ, ನಿರ್ದೇಶಕರಾದ ಚೆಕ್ಕೇರ ಎಂ. ಅಚ್ಚಯ್ಯ, ಬೊಳ್ತಂಡ ಬಿ. ಚಂಗಪ್ಪ, ಮನೆಯಪಂಡ ಎಂ. ಮಹೇಶ್, ಎಸ್. ವಿ. ಚಂದ್ರಶೇಖರ, ಪದ್ಮನಾಭ, ಗಣೇಶ, ಲಕ್ಷ್ಮಮ್ಮ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ರಮ್ಯಾ, ಸಿಇಒ ಸುಬ್ರಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net