ತೆಂಗಿನ ಕಾಯಿ ಖರೀದಿಸಿ 49 ಲಕ್ಷ ರೂ. ವಂಚನೆ

Published on

ಮೈಸೂರು: ಉದ್ಯಮಿಯೊಬ್ಬ 49 ಲಕ್ಷ ರೂ. ವೌಲ್ಯದ ತೆಂಗಿನ ಕಾಯಿಗಳನ್ನು ಖರೀದಿಸಿ ಹಣ ನೀಡದೇ ವಂಚಿಸಿದ್ದಾನೆ ಎಂದು ತೆಂಗಿನ ಕಾಯಿ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಡಿ ಮೊಹಲ್ಲಾ ತೆಂಗಿನ ಕಾಯಿ ವ್ಯಾಪಾರಿ ಸುನೀಲ್ ಕುಮಾರ್ ಅಗರವಾಲ್ ಅವರು ಚೆನ್ನೈನ ಉದ್ಯಮಿ ಶ್ರೀವತ್ಸನ್ ವಿರುದ್ಧ ದೂರು ನೀಡಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ಶ್ರೀವತ್ಸನ್ 15 ಲಕ್ಷ ರೂ. ವೌಲ್ಯದ ತೆಂಗಿನ ಕಾಯಿ ಖರೀದಿಸಿ 10 ಲಕ್ಷ ರೂ. ಮುಂಗಡ ಹಣ ನೀಡಿದ್ದರು. ಬಳಿಕ ಹಣ ನೀಡುವುದಾಗಿ ಲೋಡ್‌ಗಟ್ಟಲ್ಲೇ ತೆಂಗಿನ ಕಾಯಿ ಸಾಗಿಸಿದ್ದರು. ಅವರಿಂದ 49.47 ಲಕ್ಷ ರೂ. ಹಣ ಬರಬೇಕಿದ್ದು, ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ಈಗ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net