4,836 ಮನೆ ನಿರ್ವಣಕ್ಕೆ ಸಿದ್ಧತೆ

16 smg 1
Published on

ಶಿವಮೊಗ್ಗ: ಗೋವಿಂದಾಪುರ ಹಾಗೂ ಗೋಪಶೆಟ್ಟಿಕೊಪ್ಪದಲ್ಲಿ ಆಶ್ರಯ ಸಮಿತಿಯಿಂದ 4,836 ಮನೆಗಳ ನಿರ್ವಣಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್ ಹೇಳಿದರು.

ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗೋವಿಂದಾಪುರದಲ್ಲಿ 45 ಎಕರೆ ಹಾಗೂ ಗೋಪಶೆಟ್ಟಿಕೊಪ್ಪದಲ್ಲಿ 19 ಎಕರೆಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಮಾಡಲು ಸಮಿತಿ ಸಕಲ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.

ಪ್ರಸ್ತುತ ಮಾದರಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 4 ವರ್ಷಗಳ ಹಿಂದೆ ಆಶ್ರಯ ಮನೆಗಳಿಗೆ ದಾಖಲೆ ಸಲ್ಲಿಸಿ 8 ಸಾವಿರ ರೂ. ಪಾವತಿಸಿದ ಫಲಾನುಭವಿಗಳ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ ಆಯ್ಕೆಯಾದ ಕಡುಬಡವರಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್ಕುಮಾರ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಂಗಮೇಶ ಮಠದ್, ಕಾರ್ಯದರ್ಶಿ ಮಂಜುನಾಥ್, ಸುಮನಾ ನರೇಂದ್ರ, ಎಸ್.ಟಿ.ಪುಷ್ಪಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net