

ಸೊರಬ ತಾಲೂಕಿನ ಗುಡವಿ ಗ್ರಾಪಂ ವ್ಯಾಪ್ತಿಯ ಕಲ್ಲಂಬಿ ಗ್ರಾಮದಲ್ಲಿ ಟಗರೊಂದು 48 ಸಾವಿರ ರೂ.ಗೆ ಮಾರಾಟವಾಗಿದೆ. ಕಲ್ಲಂಬಿ ಗ್ರಾಮದ ಅಡೆಮನೆ ತೋಪಪ್ಪ ಎಂಬುವರು ಒಂದೂವರೆ ವರ್ಷದ ಹಿಂದೆ 3 ಸಾವಿರ ರೂ. ಕೊಟ್ಟು ಖರೀದಿಸಿ ತಂದು ಸಾಕಿದ್ದ ಟಗರು ಬರೋಬ್ಬರಿ 48 ಸಾವಿರ ರೂ.ಗೆ ಮಾರಾಟವಾಗಿರುವುದು ಆಶ್ಚರ್ಯ ಉಂಟುಮಾಡಿದೆ. ಸಿದ್ದಾಪುರ ತಾಲೂಕಿನ ಅರೆಂದೂರು ಗ್ರಾಮದ ವ್ಯಕ್ತಿಯೊಬ್ಬರು ಬಕ್ರೀದ್ ಹಬ್ಬಕ್ಕಾಗಿ ಭಾರಿ ಬೆಲೆ ಕೊಟ್ಟು ಟಗರನ್ನು ಖರೀದಿಸಿದ್ದಾರೆ.