48 ಜನ ಸೋಂಕಿತರು ಚೇತರಿಕೆ

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಮಂಗಳವಾರ ಆರು ಜನರಿಗೆ ಕರೊನಾ ಸೋಂಕು ದೃಢವಾಗಿದ್ದರೆ 48 ಜನ ಚೇತರಿಸಿಕೊಂಡು ಬಿಡುಗಡೆ ಹೊಂದಿರುವುದು ಕೊಂಚ ಸಮಾಧಾನ ತಂದಿದೆ.
ಆರು ಜನರಲ್ಲಿ ಮೂವರ ಸಂಪರ್ಕ ಪತ್ತೆ ಹಚ್ಚಬೇಕಾಗಿದೆ. ಒಬ್ಬ ಜ್ವರ ತರಹದ ರೋಗ (ಐಎಲ್ಐ)ದಿಂದ ಬಳಲುತ್ತಿದ್ದು, ಇಬ್ಬರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
6 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು ಪ್ರಕರಣ 1232ಕ್ಕೆ ಏರಿಕೆಯಾಗಿದೆ. 48 ಬಿಡುಗಡೆ ಸೇರಿ ಒಟ್ಟು 779 ಜನ ಚೇತರಿಸಿ ಕೊಂಡಿದ್ದಾರೆ. 442 ಸಕ್ರೀಯ ಪ್ರಕರಣಗಳಿದ್ದು, 11 ಜನ ಮೃತಪಟ್ಟಿದ್ದಾರೆ. 11 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net