47 ಲಕ್ಷ ರೂ. ಕಳೆದುಕೊಂಡ ಧಾರವಾಡ ಮಹಿಳೆ

cybe crime
Published on

ಹುಬ್ಬಳ್ಳಿ: ದೊಡ್ಡ ಕಂಪನಿ ಹಾಗೂ ಸೆಲೆಬ್ರಿಟಿಗಳಿಗಾಗಿ ಯೂಟ್ಯೂಬ್ ಚಾನಲ್ ತೆರೆಯಲಾಗಿದೆ. ಇದನ್ನು ವೀಕ್ಷಿಸಿ ದಿನಕ್ಕೆ 20 ರಿಂದ 30 ವಿವಿಧ ಕಾರ್ಯ ಮಾಡಬೇಕು. ಹೀಗೆ ಮಾಡಿದರೆ ದಿನಕ್ಕೆ 3 ಸಾವಿರ ರೂ.ಗೂ ಹೆಚ್ಚು ಹಣ ಗಳಿಸಬಹುದೆಂದು ನಂಬಿಸಿದ ವಂಚಕರು, ಧಾರವಾಡದ ಮಹಿಳೆಯಿಂದ 47 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಮಿಸ್ ಮಾಯಾ ಕುಮಾಹ್ ಎಂಬ ನಾನು, ಎಚ್‌ಆರ್ ಸ್ಟುಡಿಯೋ ಮೊಸಾಯಿಕ್ ಮಾರ್ಕೆಟಿಂಗ್ ಕಂಪನಿಯಿಂದ ಮಾತನಾಡುತ್ತಿದ್ದೇನೆ ಎಂದು ವಂಚಕರು ಮಹಿಳೆಯನ್ನು ನಂಬಿಸಿದ್ದಾರೆ.
ನಂತರ ದಿನಕ್ಕೆ ಮನೆಯಿಂದಲೇ 500 ರಿಂದ 3,000 ಸಾವಿರ ರೂ. ಗಳಿಸಬಹುದು. ಇದಕ್ಕೆ ನೀವು ಪ್ರತಿದಿನ ಯೂಟ್ಯೂಬ್‌ನಲ್ಲಿ ನೀಡುವ ವಿವಿಧ ಕಾರ್ಯ ಮಾಡಬೇಕು ಎಂದು ತಿಳಿಸಿ ಮೊದ ಮೊದಲು ಸ್ವಲ್ಪ ಹಣ ಹಾಕಿ ನಂಬಿಸಿದ್ದಾರೆ. ನಂತರ ಹಣ ಹೂಡಿಕೆ ಮಾಡಲು ಹೇಳಿ ಮಹಿಳೆಯ ವಿವಿಧ ಖಾತೆಗಳಿಂದ 47 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net