

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯಿಂದಲೇ ನಗರದ ಕಿಮ್್ಸ ಆಡಳಿತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 468 ಯೂನಿಟ್ ರಕ್ತ ಸಂಗ್ರಹವಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಶಿಬಿರದಲ್ಲಿ ವೈದ್ಯರು, ಶುಶ್ರೂಷಾಧಿಕಾರಿಗಳು, ಸಿ ಮತ್ತು ಡಿ ಗ್ರುಪ್ ನೌಕರರು, ಎಂಬಿಬಿಎಸ್ ವಿದ್ಯಾರ್ಥಿಗಳು, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ಸೇರಿದಂತೆ ಇತರರು ರಕ್ತದಾನ ಮಾಡಿದರು.
ಯಂಗ್ ಇಂಡಿಯಾ ಅಸೋಸಿಯೇಷನ್, ರೌಂಡ್ಟೇಬಲ್, ಐಎಂಎ ಹುಬ್ಬಳ್ಳಿ ಮಹಿಳಾ ವೈದ್ಯರ ಘಟಕ ಸೇರಿದಂತೆ ಇತರ ಸಂಘಟನೆಗಳು ಭಾಗವಹಿಸಿ, ರಕ್ತದಾನ ಮಾಡಲು ಪ್ರೇರೇಪಿಸಿದವು. ಕೆಲವರು ಸ್ವಯಂ ಪ್ರೇರಣೆಯಿಂದ ಆಗಮಿಸಿ ರಕ್ತದಾನ ಮಾಡಿದರು.
ಇತರರಿಗೆ ಮಾದರಿ: ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ನಮ್ಮ ಕಿಮ್ಸ್ನ ಸಿಬ್ಬಂದಿಯೇ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಬೇರೆಯವರನ್ನೂ ರಕ್ತದಾನಕ್ಕೆ ಪ್ರೇರೇಪಿಸಿದ್ದಾರೆ. ಇದು ನಮ್ಮ ಸಂಸ್ಥೆಯ ಅತ್ಯದ್ಭುತ ನಡೆ. ಕಿಮ್್ಸ ರಕ್ತಭಂಡಾರ ಸೇರಿ ಇತರ ವಿಭಾಗಗಳು ಮೇಲುಸ್ತುವಾರಿ ವಹಿಸಿದ್ದವು. ರಕ್ತದಾನ ಮಾಡಲು ಇನ್ನಷ್ಟು ಜನರಿಗೆ ಸಲಹೆ-ಮಾರ್ಗದರ್ಶನ ನೀಡಲು ಅಣಿಯಾಗಬೇಕು ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಶಿಬಿರದ ಸಂಯೋಜಕ ಡಾ. ಸುರೇಶ ಹಚ್ಚಣ್ಣವರ, ಡಾ. ಜಿ.ಸಿ. ಪಾಟೀಲ, ಡಾ. ಈಶ್ವರ ಹಸಬಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಕಸ್ತೂರಿ ಡೋಣಿಮಠ, ಡಾ. ಕವಿತಾ ಏವೂರ, ಡಾ. ಶಶಿ ಹೊಸಮನಿ, ಡಾ. ಪುರುಷೋತ್ತಮರಡ್ಡಿ, ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ಗುರುಶಾಂತಪ್ಪ ಯಲಗಚ್ಚಿನ ಇತರರು ಇದ್ದರು.